21ರಿಂದ ಅ.3ರವರೆಗೆ ಶೃಂಗೇರಿಯಲ್ಲಿ ಶ್ರೀ ಶರನ್ನವರಾತ್ರಿ ಸಂಭ್ರಮ

sri-1 (7)
Published on

ಶೃಂಗೇರಿ: ಶೃಂಗೇರಿಯ ಶ್ರೀಶಾರದಾಪೀಠಂನಲ್ಲಿ ಶ್ರೀ ಶರನ್ನವರಾತ್ರಿ ಮಹೋತ್ಸವ ಸೆ.21ರಿಂದ ಅಕ್ಟೋಬರ್ 3ರ ವರೆಗೆ ವಿಜೃಂಭಣೆಯಿಂದ ನಡೆಯಲಿದೆ.

ನವರಾತ್ರಿಯ ಹಿಂದಿನ ದಿನ ಸೆ.21ರಂದು ಭಾನುವಾರ ಭಾದ್ರಪದ ಕೃಷ್ಣ ಅಮಾವಾಸ್ಯೆ ದಿನ ಜಗನ್ಮಾತೆಗೆ ಮಹಾಭಿಷೇಕ ನೆರವೇರಲಿದೆ. ಶ್ರೀಶಾರದೆಗೆ ಆನೇಕ ವಿಧವಾದ ಫಲ-ಪಂಚಾಮೃತ ಅಭಿಷೇಕದ ನಂತರ ಮಹಾನ್ಯಾಸಪೂರ್ವಕ ಶತರುದ್ರಾಭಿಷೇಕ ಹಾಗೂ 108 ಸಲ ಶ್ರೀಸೂಕ್ತ ಪಠನದಿಂದ ಅಭಿಷೇಕ ನಡೆಯಲಿಯಲಿದೆ. ಅಂದು ತಾಯಿ ಶಾರದೆ ಜಗತ್ಪ್ರಸೂತಿಕಾ ಅಲಂಕಾರ ಕಂಗೊಳಿಸಲಿದ್ದಾಳೆ.

ನವರಾತ್ರಿಯ ಅಂಗವಾಗಿ ಶ್ರೀದೇವಿಯು ವಿವಿಧ ಅಲಂಕಾರದಲ್ಲಿ ಕಂಗೊಳಿಸಲಿದ್ದಾಳೆ. ಸೆ.22ರಂದು ಶ್ರೀ ಶಾರದಾ ಪ್ರತಿಷ್ಠೆ, ಬ್ರಾಹ್ಮೀ ಅಲಂಕಾರ, 23ಕ್ಕೆ ಹಂಸವಾಹನಾಲಂಕಾರ, 24ರಂದು ಮಾಹೇಶ್ವರೀ, 25ಕ್ಕೆ ಮಯೂರ ಅಲಂಕಾರ, 26ರ ಶುಕ್ರವಾರ ವೈಷ್ಣವಿ ಅಲಂಕಾರ, 27ಕ್ಕೆ ಇಂದ್ರಾಣಿ ಅಲಂಕಾರ. ಶತಚಂಡೀಯಾಗದ ಪ್ರಯುಕ್ತ ಶಾಲಾ ಪ್ರವೇಶ,ಪುರಶ್ಚರಣಾರಂಭ. 28ಕ್ಕೆ ಮೋಹಿನಿ ಅಲಂಕಾರ, 29ರಂದು ಸರಸ್ವತ್ಯಾವಾಹನೆ, ವೀಣಾಶಾರದಾಲಂಕಾರ, 30ಕ್ಕೆ ರಾಜರಾಜೇಶ್ವರಿ ಅಲಂಕಾರ,ಅಕ್ಟೋಬರ್ 1ರಂದು ಮಹಾನವಮಿ, ಸಿಂಹವಾಹನಾಲಂಕಾರ, ಶತಚಂಡೀಯಾಗದ ಪೂರ್ಣಾಹುತಿ, ಗಜಾಶ್ವಪೂಜೆ, ಅ.2ರಂದು ವಿಜಯದಶಮಿ, ಗಜಲಕ್ಷ್ಮೀ ಅಲಂಕಾರ, ಬೆಳಗ್ಗೆ ಲಕ್ಷ್ಮೀನಾರಾಯಣ ಹೃದಯಹೋಮ,ರಾಮಪಟ್ಟಾಭಿಷೇಕ ಸರ್ಗ ಪಾರಾಯಣಿ, ಸಂಜೆ ವಿಜಯೋತ್ಸವ,ಶಮೀಪೂಜೆ, ಅ.3ರಂದು ಗಜಲಕ್ಷ್ಮೀ ಅಲಂಕಾರ, ಶ್ರೀಶಾರದಾಂಬಾ ಮಹಾರಥೋತ್ಸವ, ಶ್ರೀ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ ನಡೆಯಲಿದೆ.

ಈ ಜಗತ್ತಿನಲ್ಲಿ ಪರಾಶಕ್ತಿ ನಾನೋಬ್ಬಳೇ..ನನ್ನನ್ನು ಬಿಟ್ಟು ಎರಡನೇ ಯದು ಯಾವುದು ಇಲ್ಲ ಎಂದು ಶ್ರೀದೇವಿ ಮಾಹಾತ್ಮ್ಯದಲ್ಲಿ ಶ್ರೀ ಶಾರದೆತನ್ನು ವರ್ಣಿಸಲಾಗಿದೆ. ಈ ವಿವಿಧ ಅಲಂಕಾರಗಳು, ಅವತಾರಗಳು ಎಲ್ಲವೂ ಆ ಜಗನ್ಮಾತೆಯದ್ದೇ ಆಗಿದೆ. ವಿದ್ಯೆಯನ್ನು ಅನುಗ್ರಹಿಸಿದಾಗ ಸರಸ್ವತಿಯಾಗಿ, ಧನ ಸಂಪತ್ತನ್ನು ನೀಡುವಾಗ ಮಹಾಲಕ್ಷ್ಮೀಯಾಗಿ, ದುಷ್ಟಸಂಹಾರ ಕಾಲದಲ್ಲಿ ಚಾಮುಂಡಿಯಾಗಿ, ಭಯವನ್ನು ಹೋಗಲಾಡಿಸುವ ದುರ್ಗಾಪರಮೇಶ್ವರಿಯಾಗಿ ಆವತರಿಸಿ ಭಕ್ತರನ್ನು ಅನುಗ್ರಹಿಸುತ್ತಾಳೆ. ಜಗದಂಬೆಯ ರೂಪಗಳು ಭಿನ್ನಭಿನ್ನವಾಗಿದ್ದರೂ ಸಹ ಆ ಚೈತನ್ಯ ಒಂದೇ ಆಗಿರುತ್ತದೆ. ವರ್ಷಕೊಮ್ಮೆ ನಾಡಿನ ಎಲ್ಲ ವರ್ಗದ ಜನರನ್ನು ಒಂದೆಡೆ ಸೇರಿಸಿ ಜನರಲ್ಲಿ ಧಾರ್ಮಿಕ ಜಾಗೃತಿ ಮೂಡಿಸಲು ನಡೆಯಲಿರುವ ನವರಾತ್ರಿ ಉತ್ಸವದ ವೈಭವವನ್ನು ಎಷ್ಟು ವರ್ಣಿಸಿದರೂ ಸಾಲದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net