ಇಡೀ ಶೈಣಿಕ ವರ್ಷಕ್ಕೆ ಬೇಕಾಗುವಷ್ಟು ನೋಟ್ಬುಕ್ಗಳು, ಶಾಲಾ ಬ್ಯಾಗ್, ನೀರಿನ ಬಾಟಲಿ, ಸ್ಯಾಂಡಲ್ಸ್, ಫಿಲ್ಟರ್, ಗುಣಮಟ್ಟದ ರಬ್ಬರ್ ಮ್ಯಾಟ್, ಪ್ರಯಾಣ ವ್ಯವಸ್ಥೆ, ಕಲಿಕೋಪಕರಣ, ಧ್ವನಿವರ್ಧಕ, ಛತ್ರಿಗಳು, ಮಳೆ ಕವಚ, ಮಕ್ಕಳಿಗೆ ಊಟಕ್ಕೆ ಕುಳಿತುಕೊಳ್ಳಲು ವ್ಯವಸ್ಥೆ, ಪೌಷ್ಟಿಕ ವನ ಹೀಗೆ ಎಸ್ಡಿಎಂಸಿ ದಾನಿಗಳ ಸಹಕಾರದಿಂದ ಮಕ್ಕಳಿಗೆ ಸೌಲಭ್ಯ ದೊರಕುವಂತೆ ಮಾಡಿದೆ. ಕೇವಲ 11ಮಕ್ಕಳು ಒಂದರಿಂದ ನಾಲ್ಕನೇ ತರಗತಿವರೆಗೆ ವ್ಯಾಸಂಗ ಮಾಡುತ್ತಿದ್ದು, ಶಿಕ ಎಸ್.ಶರವಣ ಅವರ ಶ್ರಮಕ್ಕೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಇಚ್ಛಾಶಕ್ತಿ, ಪ್ರಾಮಾಣಿಕತೆ, ಕಾಳಜಿ ಇದ್ದರೆ ಕುಗ್ರಾಮದ ಶಾಲೆಗಳನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಬಹುದು ಎಂಬುದಕ್ಕೆ ಈ ಶಾಲೆ ನಿದರ್ಶನ.