ಕನ್ನಡ ಶಾಲೆಗಳನ್ನು ನಡೆಸಲು ರಾಜ್ಯ ಸರ್ಕಾರ ವಿಫಲ

ಶಿಕಾರಿಪುರ: ಸರ್ಕಾರಿ ಕನ್ನಡ ಶಾಲೆಗಳು ಸಮರ್ಪಕ ನಿರ್ವಹಣೆ ಕೊರತೆಯಿಂದ ಮುಚ್ಚುತ್ತಿವೆ. ಸರ್ಕಾರಿ ಶಾಲೆಗಳನ್ನು ನಿರ್ವಹಿಸಲು ಖಾಸಗಿ ಅವರಿಗೆ ಆಹ್ವಾನ ನೀಡಿರುವುದು ಅಕ್ಷಮ್ಯ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ಹೇಳಿದರು.
Kannada
ಗೀತಗಾಯನ ರಸಗ್ರಹಣ ಶಿಬಿರವನ್ನು ಕಸಾಪ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ಉದ್ಘಾಟಿಸಿದರು. ಎಸ್.ಎನ್.ನರಸಿಂಹಸ್ವಾಮಿ, ಬಿ.ಪಾಪಯ್ಯ, ನವೀನ್‌ಕುಮಾರ್, ಎಚ್.ಎಸ್.ರಘು ಇತರರಿದ್ದರು.
Published on: 

ಶಿಕಾರಿಪುರ: ಸರ್ಕಾರಿ ಕನ್ನಡ ಶಾಲೆಗಳು ಸಮರ್ಪಕ ನಿರ್ವಹಣೆ ಕೊರತೆಯಿಂದ ಮುಚ್ಚುತ್ತಿವೆ. ಸರ್ಕಾರಿ ಶಾಲೆಗಳನ್ನು ನಿರ್ವಹಿಸಲು ಖಾಸಗಿ ಅವರಿಗೆ ಆಹ್ವಾನ ನೀಡಿರುವುದು ಅಕ್ಷಮ್ಯ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ಹೇಳಿದರು.

ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯಿಂದ ಪಟ್ಟಣದಲ್ಲಿ ಆಯೋಜಿಸಿದ್ದ ಗೀತಗಾಯನ ಮತ್ತು ರಸಗ್ರಹಣ ಶಿಬಿರದಲ್ಲಿ ಮಾತನಾಡಿ, ದ್ವಿಭಾಷಾ ನೀತಿ ಜಾರಿಗೆ ಬಂದಿದ್ದು, ಒಂದರಿಂದ 5ನೇ ತರಗತಿ ಮಕ್ಕಳಿಗೆ ಇಂಗ್ಲಿಷ್‌ನಲ್ಲಿ ಕಲಿಸುವಂತೆ ಸರ್ಕಾರ ಮೌಖಿಕ ಆದೇಶ ನೀಡಿದೆ. ಮುಂದಿನ ವರ್ಷದಿಂದ 6ನೇ ತರಗತಿಗೆ ಇಂಗ್ಲಿಷ್ ಬೋಧನೆ ಅಗತ್ಯವಂತೆ. ಇದನ್ನು ನಾವು ಪ್ರತಿಭಟಿಸಬೇಕು. ನಮ್ಮ ಮಕ್ಕಳಿಗೆ 1ರಿಂದ 10ನೇ ತರಗತಿವರೆಗೆ ಕನ್ನಡ ಕಲಿಕೆ ಅಗತ್ಯವಿದೆ ಎಂದು ತಿಳಿಸಿದರು.

ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಬಿ.ಪಾಪಯ್ಯ ಮಾತನಾಡಿ, ಸಂಗೀತ ಮತ್ತು ಸಾಹಿತ್ಯ ಒಂದೇ ನಾಣ್ಯದ ಎರಡು ಮುಖಗಳು. ಅರ್ಥಪೂರ್ಣ ಸಾಹಿತ್ಯಕ್ಕೆ ಸುಮಧುರ ಸಂಗೀತ ಜೋಡಿಸಿದರೆ ಸುಶ್ರಾವ್ಯ ಗೀತೆಗಳು ರಚನೆಯಾಗುತ್ತವೆ. ಈ ರೀತಿ ಕಾರ್ಯಕ್ರಮ ಅವಕಾಶವಂಚಿತ ಪ್ರತಿಭೆಗಳಿಗೆ ಸೂಕ್ತ ವೇದಿಕೆ ದೊರಕಿಸುತ್ತದೆ ಎಂದರು.

ಸಾಹಿತ್ಯ ಮತ್ತು ಸಾಂಪ್ರದಾಯಿಕ ವೇದಿಕೆ ತಾಲೂಕು ಅಧ್ಯಕ್ಷ ಎಸ್.ಎನ್.ನರಸಿಂಹಸ್ವಾಮಿ, ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ನವೀನ್‌ಕುಮಾರ್, ಕಸಾಪ ತಾಲೂಕು ಅಧ್ಯಕ್ಷ ಎಚ್.ಎಸ್.ರಘು, ಮಂಜಪ್ಪ, ಸತ್ಯನಾರಾಯಣ, ಮಂಜಪ್ಪ, ರಾಮಣ್ಣ, ಲೋಕೇಶ್, ಸುಷ್ಮಾ ದೀಕ್ಷಿತ್, ನಾಗರಾಜಾಚಾರ್ ಇತರರಿದ್ದರು.

ಕಾ.ವೆಂ.ಶ್ರೀನಿವಾಸಮೂರ್ತಿ ಬರೆದ ಸಾಹಿತ್ಯಕ್ಕೆ ದನಿಯಾಗಿ ಎನ್.ವಿ.ಶಿವಕುಮಾರ್, ಎಂ.ಪಿ.ಷಣ್ಮುಖಪ್ಪ, ಕೆ.ಪಿ.ರಘುಪತಿ, ರವಿಕುಮಾರ್, ರಮೇಶ್, ಅಬು ಸಾಲೇಹ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳು ಗೀತಗಾಯನ ನಡೆಸಿಕೊಟ್ಟರು. ನಾಟ್ಯಶಾಲಾ ಸಂಸ್ಥೆಯ ಸುಷ್ಮಾ ದೀಕ್ಷಿತ್ ಅವರ ತಂಡ ಭರತನಾಟ್ಯ ಪ್ರದರ್ಶಿಸಿತು.