ಸಿಗಂದೂರು ಧರ್ಮದರ್ಶಿಗಳು, ಮಾಜಿ ಸಿಎಂ ಬಂಗಾರಪ್ಪ ಕುಟುಂಬ, ಮಾಜಿ ಸಚಿವ ಆರ್.ಎಲ್.ಜಾಲಪ್ಪ, ಉದ್ಯಮಿ ಜೆ.ಪಿ.ನಾರಾಯಣಸ್ವಾಮಿ ಮುಂತಾದವರ ಸಹಕಾರದಿಂದ ಶಿವಮೊಗ್ಗದಲ್ಲಿ ಈಡಿಗರ ಭವನ ನಿರ್ಮಾಣವಾಗಿದೆ. ಆ ಕಾರ್ಯಕ್ಕೆ ಸಮಾಜದ ಅನೇಕರು ಕೈ ಜೋಡಿಸಿದ್ದರು. ಈಗಲೂ ಸಮಾಜದವರು ನಮ್ಮ ಕೈ ಹಿಡಿಯಬೇಕೆಂದು ಜಿಲ್ಲಾ ಆರ್ಯ ಈಡಿಗರ ಸಂಘದ ಅಧ್ಯಕ್ಷ ಶ್ರೀಧರ್ ಹುಲ್ತಿಕೊಪ್ಪ ಮನವಿ ಮಾಡಿದರು. ನಮ್ಮ ಸಮಾಜದ ಎಲ್ಲ ಜನಪ್ರತಿನಿಧಿಗಳು ಹಾಸ್ಟೆಲ್‌ನ ಹೆಚ್ಚುವರಿ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡುವ ಭರವಸೆ ನೀಡಿದ್ದಾರೆ. ಸ್ಥಳೀಯ ಶಾಸಕರು, ಸಂಸದರಿಂದಲೂ ನೆರವಿನ ಆಶ್ವಾಸನೆ ದೊರೆತಿದೆ ಎಂದರು.