ಹಾನಗಲ್ ಕುಮಾರಸ್ವಾಮಿ ಕಪ್ ಗೆದ್ದ ಶಿವಮೊಗ್ಗ ಮಹಾಸಭಾ Cricket Tournament

ಮಹಾಸಭಾದ ಹಾನಗಲ್ ಕುಮಾರಸ್ವಾಮಿ ಕಪ್ ಕ್ರಿಕೆಟ್ ಪಂದ್ಯಾವಳಿಯನ್ನು ಶಿವಮೊಗ್ಗ ಮಹಾಸಭಾ ಘಟಕ ಗೆದ್ದುಕೊಂಡಿತು. ರೋಚಕ ಫೈನಲ್ ಪಂದ್ಯದಲ್ಲಿ ಸೋತ ಸಾಗರ ಮಹಾಸಭಾ ತಂಡ ದ್ವಿತೀಯ ಸ್ಥಾನ ಪಡೆಯಿತು.
Cricket Tournament
ಮಹಾಸಭಾದ ಹಾನಗಲ್ ಕುಮಾರಸ್ವಾಮಿ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಆದ ಶಿವಮೊಗ್ಗ ಮಹಾಸಭಾ ಘಟಕ ತಂಡಕ್ಕೆ ಮಹಾಸಭಾದ ರಾಜ್ಯ ಯುವ ಘಟಕದ ಅಧ್ಯಕ್ಷ ಮನೋಹರ್ ಅಬ್ಬಿಗೆರೆ ಪ್ರಶಸ್ತಿ ವಿತರಿಸಿದರು. ಸಿ.ಎಸ್.ಷಡಾಕ್ಷರಿ, ಬಿ.ಯು.ಚಂದ್ರಶೇಖರ್, ರುದ್ರಮುನಿ ಸಜ್ಜನ್, ಬಳ್ಳಕೆರೆ ಸಂತೋಷ್, ಸಚಿನ್ ಪೂಜಾರ್, ಅನಿಲ್ ಪಾಟೀಲ್, ರಾಜಶೇಖರ್, ಕೆ.ಆರ್.ಸೋಮನಾಥ್ ಇದ್ದರು.
Published on: 

ಶಿವಮೊಗ್ಗ: ವೀರಶೈವ ಲಿಂಗಾಯತ ಸಮಾಜದ ಇಂದಿನ ಯುವಕರು ತಾನು ಬೆಳೆದು ಸಮಾಜಕ್ಕೂ ಕೊಡುಗೆ ನೀಡುವಂತಾಗಬೇಕು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಹೇಳಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯ ಯುವ ಘಟಕ ಹಾಗೂ ಶಿವಮೊಗ್ಗ ಜಿಲ್ಲಾ ಘಟಕದ ವತಿಯಿಂದ ನಗರದ ಜೆಎನ್‌ಎನ್‌ಸಿ ಕಾಲೇಜು ಕ್ರೀಡಾಂಗಣದಲ್ಲಿ ಆಯೋಜಿಸಿರುವ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾವಳಿ ವಿಜೇತರಿಗೆ ಇಂದು ಸಂಜೆ ಬಹುಮಾನ ವಿತರಿಸಿ ಮಾತನಾಡಿದ ಅವರು, ಕ್ರಿಕೆಟ್ ಆಟದಲ್ಲಿ ಎದೆಗಾರಿಕೆಯಿಂದ ಬೌಲಿಂಗ್ ಹಾಗೂ ಬ್ಯಾಟಿಂಗ್ ಮಾಡುವಂತೆ ಜೀವನದಲ್ಲಿ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಯಶಸ್ವಿ ನಾಯಕರಾಗುವಂತೆ ಯುವಜನರಿಗೆ ಕಿವಿಮಾತು ಹೇಳಿದರು.

ಮಹಾಸಭಾ ಇದೇ ಪ್ರಥಮಬಾರಿಗೆ ಜಿಲ್ಲಾಮಟ್ಟದ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿ ಯಶಸ್ವಿಯಾಗಿದೆ. ಸಮಾಜದ ಸಂಘಟನೆಗೆ ಇದು ಸಹಕಾರಿ ಎಂದರು.

ಮಹಾಸಭಾ ಜಿಲ್ಲಾ ಘಟಕ ಅಧ್ಯಕ್ಷ ರುದ್ರಮುನಿ ಸಜ್ಜನ್ ಮಾತನಾಡಿ, ಮಹಾಸಭಾ ಸ್ಥಾಪಿಸಿದ ಶ್ರೀ ಹಾನಗಲ್ ಕುಮಾರಸ್ವಾಮಿ ಅವರ ಹೆಸರಿನಲ್ಲಿ ಪಂದ್ಯಾವಳಿ ಆಯೋಜಿಸುವ ಮೂಲಕ ಸಮಾಜ ಬಾಂಧವರಲ್ಲಿ ಒಗ್ಗಟ್ಟು ಮೂಡಿಸಲು ಹಾಗೂ ಸಮಾಜದ ಪ್ರತಿಯೊಬ್ಬರು ಮಹಾಸಭಾದ ಸದಸ್ಯರಾಗುವಂತೆ ಪ್ರೇರೇಪಿಸಲು ಸಹಕಾರಿಯಾಗಿದೆ ಎಂದರು.

ಮಹಾಸಭಾದ ರಾಜ್ಯ ಯುವ ಘಟಕದ ಅಧ್ಯಕ್ಷ ಮನೋಹರ್ ಅಬ್ಬಿಗೆರೆ ಮಾತನಾಡಿ, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕ್ರಿಕೆಟ್ ಪಂದ್ಯಾವಳಿ ಆಯೋಜಿಸುವ ಮೂಲಕ ಮಹಾಸಭಾದ ಸದಸ್ಯತ್ವವನ್ನು ಹೆಚ್ಚಿಸುವ ಪ್ರಯತ್ನ ನಡೆದಿದ್ದು, ಶಿವಮೊಗ್ಗ ಜಿಲ್ಲಾ ಘಟಕ ಈ ನಿಟ್ಟಿನಲ್ಲಿ ಅತ್ಯುತ್ತಮ ಪಂದ್ಯಾವಳಿಯನ್ನು ಎರಡು ದಿನ ಯಶಸ್ವಿಯಾಗಿ ನಡೆಸಿದೆ ಎಂದರು. ಫೈನಲ್ ಪಂದ್ಯಕ್ಕೂ ಮುನ್ನ ಸಂಸದ ಬಿ.ವೈ.ರಾಘವೇಂದ್ರ ಆಟಗಾರರಿಗೆ ಶುಭ ಕೋರಿದರು.

ಶಿವಮೊಗ್ಗದ ಬಿಎಸ್‌ಸಿ ಬಟ್ಟೆ ಮಳಿಗೆ ವ್ಯವಸ್ಥಾಪಕ ನಿರ್ದೇಶಕ ಬಿ.ಯು.ಚಂದ್ರಶೇಖರ್, ಮಹಾಸಭೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಳ್ಳಕೆರೆ ಸಂತೋಷ್, ಯುವ ಘಟಕದ ಅಧ್ಯಕ್ಷ ಸಚಿನ್ ಪೂಜಾರ್, ಪ್ರಧಾನ ಕಾರ್ಯದರ್ಶಿ ಅನಿಲ್ ಪಾಟೀಲ್, ಮಹಾನಗರ ಪಾಲಿಕೆ ಘಟಕದ ಅಧ್ಯಕ್ಷ ರಾಜಶೇಖರ್, ಉಪಾಧ್ಯಕ್ಷ ವಿ.ಟಿ.ಅರುಣ್, ಪ್ರಮುಖರಾದ ಉಮೇಶ್ ಕತ್ತಿ, ಅವಿನಾಶ್, ಅಂಕುಶ್, ರಾಕೇಶ್, ಮಂಗಳಾ ನಾಗೇಂದ್ರ, ಮಾಧ್ಯಮ ಘಟಕದ ಪ್ರಮುಖ ಕೆ.ಆರ್.ಸೋಮನಾಥ್ ಉಪಸ್ಥಿತರಿದ್ದರು.

ಕಪ್ ಗೆದ್ದ ಶಿವಮೊಗ್ಗ ಮಹಾಸಭಾ ಘಟಕ

ಮಹಾಸಭಾದ ಹಾನಗಲ್ ಕುಮಾರಸ್ವಾಮಿ ಕಪ್ ಕ್ರಿಕೆಟ್ ಪಂದ್ಯಾವಳಿಯನ್ನು ಶಿವಮೊಗ್ಗ ಮಹಾಸಭಾ ಘಟಕ ಗೆದ್ದುಕೊಂಡಿತು. ರೋಚಕ ಫೈನಲ್ ಪಂದ್ಯದಲ್ಲಿ ಸೋತ ಸಾಗರ ಮಹಾಸಭಾ ತಂಡ ದ್ವಿತೀಯ ಸ್ಥಾನ ಪಡೆಯಿತು. ಹೊಸನಗರ ತಂಡ ತೃತೀಯ ಸ್ಥಾನ ಪಡೆಯಿತು. ಪಂದ್ಯಾವಳಿಯಲ್ಲಿ 30ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು. ಪ್ರಥಮ ಬಹುಮಾನ 33,333 ರೂ., ದ್ವಿತೀಯ ಬಹುಮಾನ 22,222 ರೂ., ತೃತೀಯ ಬಹುಮಾನ 11,111 ರೂ. ಹಾಗೂ ಆಕರ್ಷಕ ಟ್ರೋಫಿ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net