ಉತ್ತಮ ಕೆಲಸಗಳಿಗೆ ಪ್ರತಿಫಲ ನಿಶ್ಚಿತ

ಸಾಗರ: ನಾವು ಮಾಡುವ ಉತ್ತಮ ಕೆಲಸಗಳಿಗೆ ಪ್ರತಿಫಲ ಖಂಡಿತವಾಗಿಯೂ ಸಿಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಸದಾನಂದ ಸ್ವಾಮಿ ಹೇಳಿದರು.
teacher
ಸಾಗರ ತಾಲೂಕು ತಡಗಳಲೆ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮವನ್ನು ಸಿ.ಸದಾನಂದ ಸ್ವಾಮಿ ಉದ್ಘಾಟಿಸಿದರು. ಯಮನೂರಪ್ಪ ಕಾಯಣ್ಣ, ಲಕ್ಷ್ಮಣ್ ನಾಯಕ್, ಬಿ.ಓಂಕಾರಪ್ಪ, ಎ.ಎಸ್.ಭೂಮೇಶ್, ವಿ.ಟಿ.ಸ್ವಾಮಿ ಇತರರಿದ್ದರು.
Published on: 

ಸಾಗರ: ನಾವು ಮಾಡುವ ಉತ್ತಮ ಕೆಲಸಗಳಿಗೆ ಪ್ರತಿಫಲ ಖಂಡಿತವಾಗಿಯೂ ಸಿಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಸದಾನಂದ ಸ್ವಾಮಿ ಹೇಳಿದರು.

ತಾಲೂಕಿನ ತಡಗಳಲೆ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿ, ಮುಖ್ಯಶಿಕ್ಷಕರಾಗಿ ಕಾರ್ಯನಿರ್ವಹಿಸಿ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಬಡ್ತಿ ಹೊಂದಿರುವ ಯಮನೂರಪ್ಪ ಕಾಯಣ್ಣ ಅವರಿಗೆ ಶುಭವಾಗಲಿ ಎಂದು ಆಶಿಸಿದರು.

ಪ್ರತಿಯೊಬ್ಬರಲ್ಲೂ ವಿಶೇಷ ವ್ಯಕ್ತಿತ್ವ ಇದ್ದು, ಉತ್ತಮ ಗುಣಗಳನ್ನು ವಿದ್ಯಾರ್ಥಿಗಳಿಗೆ ಧಾರೆಯೆರೆಯುವ ಮೂಲಕ ಮಾದರಿ ಸಮಾಜ ನಿರ್ಮಾಣಕ್ಕೆ ಕಾರಣರಾಗಬೇಕು. ಯಾರಿಗೂ ಹುದ್ದೆ ಮುಖ್ಯ ಆಗಬಾರದು. ತಾವು ಕೆಲಸ ಮಾಡುವ ಹುದ್ದೆ ಮೂಲಕ ಜನರಿಗೆ ಯಾವ ರೀತಿ ಸಹಾಯ ಮಾಡಲು ಸಾಧ್ಯ ಎನ್ನುವ ಬಗ್ಗೆ ಗಮನ ಹರಿಸಬೇಕು ಎಂದರು.

ಶಿಕ್ಷಣಾಧಿಕಾರಿ ಯಮನೂರಪ್ಪ ಕಾಯಣ್ಣ ಮಾತನಾಡಿ, ಪ್ರತಿ ಶಾಲೆ ಸಮುದಾಯದ ಕೇಂದ್ರವಾಗಬೇಕು. ಪ್ರತಿ ಮಗುವೂ ಶಿಕ್ಷಣ ಪಡೆಯುವ ಹಕ್ಕು ಹೊಂದಿರುತ್ತದೆ. ಅಂತಹ ಶಿಕ್ಷಣ ನೀಡುವ ಶ್ರೇಷ್ಠ ಕೆಲಸ ನಮ್ಮದು. ಉತ್ತಮ ಸಮಾಜ ನಿರ್ಮಾಣಕ್ಕೆ ಉತ್ತಮ ಶಿಕ್ಷಣ ನೀಡುವ ಅಗತ್ಯವಿದೆ. ಮಕ್ಕಳ ಮನಸ್ಸನ್ನು ಅರಿತು ಕೆಲಸ ಮಾಡಿದರೆ ಯಶಸ್ವಿ ಶಿಕ್ಷಕರಾಗಲು ಸಾಧ್ಯ ಎಂದು ತಿಳಿಸಿದರು.

ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಲಕ್ಷ್ಮಣ್ ನಾಯಕ್, ಶಿಕ್ಷಣಾಧಿಕಾರಿ ಸಂಘದ ತಾಲೂಕು ಅಧ್ಯಕ್ಷ ಬಿ.ಓಂಕಾರಪ್ಪ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎ.ಎಸ್.ಭೂಮೇಶ್, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ವಿ.ಟಿ.ಸ್ವಾಮಿ, ಶಿವಾನಂದ, ಮಹಾಬಲೇಶ್ವರ, ಮಲ್ಲಿಕಾರ್ಜುನ ಗೌಡ, ಉಮಾಪತಿ, ಮಹೇಶ್, ಸೀತಾರಾಮ್, ಮೈಲಾರಪ್ಪ, ಅನ್ನಪೂರ್ಣಾ, ದತ್ತಾತ್ರೇಯ ಭಟ್, ಸುರೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net