ಅಡಕೆ ಅಡಮಾನ ಸಾಲಕ್ಕೆ ಡಿಮಾಂಡ್​

ಆನವೇರಿಯ ಸಹಕಾರ ಸಂದಲ್ಲಿ ಶೇಖರಿಸಿರುವ ಅಡಕೆ
ಆನವೇರಿಯ ಸಹಕಾರ ಸಂದಲ್ಲಿ ಶೇಖರಿಸಿರುವ ಅಡಕೆ
Published on

ಪ್ರಮುಖ ಮುಖ್ಯಾಂಶಗಳು

  • ಕೈ ವ್ಯಾಪಾರಸ್ಥರಿಗೆ ನೀಡಲು ಮೀನಮೇಷ
  • ಸಹಕಾರ ಸಂಗಳತ್ತ ಬೆಳೆಗಾರರ ಚಿತ್ತ
  • ಕೈವ್ಯಾಪಾರಿಗಳಿಂದ ಕಡಿಮೆ ಬೆಲೆ ನಿಗದಿ
ಹೊಳೆಹೊನ್ನೂರು: ಅಡಕೆ ಬೆಳೆಗಾರರ ಮನೆ ಬಾಗಿಲಲ್ಲಿ ನಡೆಯುತ್ತಿದ್ದ ಅಡಕೆ ಕೈ ವ್ಯಾಪಾರ ಸೊರಗುತ್ತಿರುವುದರಿಂದ ಇದೀಗ ಬೆಳೆಗಾರರು ಅಡಕೆ ಮಾರಾಟದ ಬದಲಿಗೆ ಅಡಕೆ ಅಡಮಾನ ಸಾಲದ ಮೊರೆ ಹೋಗುತ್ತಿದ್ದಾರೆ.
ಕೆಲವು ಬೆಳೆಗಾರರು ಇದಕ್ಕಾಗಿ ಸಹಕಾರ ಸಂಗಳತ್ತ ಮುಖ ಮಾಡುತ್ತಿದ್ದಾರೆ. ಇದೀಗ ಸಣ್ಣಪುಟ್ಟ ಸಹಕಾರ ಸಂಗಳಲ್ಲೂ ಅಡಕೆ ಚೀಲಗಳು ತುಂಬುತ್ತಿವೆ. ಗ್ರಾಮಾಂತರ ಭಾಗದಲ್ಲಿ ಭಾಗಶ@ ಅಡಕೆ ವಹಿವಾಟು ಕೈವ್ಯಾಪಾರಸ್ಥರ ಮೇಲೆಯೇ ನಿಂತಿದೆ. ಆದರೆ ಕಳೆದೊಂದು ತಿಂಗಳಿನಿಂದ ಅಡಕೆ ಕೈ ವ್ಯಾಪಾರ ಸ್ಥಗಿತಗೊಂಡಿದೆ.
ಕೈ ವ್ಯಾಪಾರಸ್ಥರು ಅಡಕೆ ಖರೀದಿಗೆ ತಂತ್ರಗಳನ್ನು ಬಳಸಿ ಬೆಳೆಗಾರರನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಮಾಡುತ್ತಿರುವ ಪ್ರಯತ್ನಗಳು ನಿರೀತ ಲ ನೀಡುತ್ತಿಲ್ಲ. ಮನೆ ಬಾಗಿಲಿಗೆ ಬರುತ್ತಿರುವ ಕೈ ವ್ಯಾಪಾರಸ್ಥರಿಗೆ ಬೆಳೆಗಾರರು ಮೊದಲಿನಂತೆ ಸ್ಪಂದಿಸುತ್ತಿಲ್ಲ. ಮೊದಲೆಲ್ಲ ಮಾರುಕಟ್ಟೆ ಬೆಲೆಗಿಂತ 1,000&1,500 ಸಾವಿರ ರೂ. ಹೆಚ್ಚು ನೀಡಿ ಮನೆ ಬಾಗಿಲಿಗೆ ಬಂದು ಅಡಕೆ ಖರೀದಿಸುತ್ತಿದ್ದರು. ಕೈವ್ಯಾಪಾರಸ್ಥರು ಇದೀಗ ವರಸೆ ಬದಲಿಸಿ ಮಾರುಕಟ್ಟೆ ದರಕ್ಕಿಂತ 1,500 ರೂ.ನಿಂದ 2.000 ರೂ. ಕಡಿಮೆ ಬೆಲೆ ನಿಗದಿ ಮಾಡುತ್ತಿದ್ದಾರೆ. ಮಾರುಕಟ್ಟೆ ದರ ಏರುಗತಿಯಲ್ಲಿ ಸಾಗುತ್ತಿದೆ. ಆದರೂ ಕೈವ್ಯಾಪಾರಸ್ಥರು ಗರಿಷ್ಠ ಬೆಲೆ ಪರಿಗಣಿಸದೆ ಕಡಿಮೆ ಬೆಲೆ ಕೇಳುತ್ತಿರುವುದರಿಂದ ಬೆಳೆಗಾರರು ಕೈ ವ್ಯಾಪಾರಸ್ಥರಿಗೆ ಮಾರಾಟ ಮಾಡಲು ನಿರಾಕರಿಸುತ್ತಿದ್ದಾರೆ. ಹಾಗಾಗಿ ಅಡಮಾನ ಸಾಲದ ಮೊರೆಹೋಗಿದ್ದಾರೆ.
ಸಿಗುತ್ತಿಲ್ಲ ನಿಗದಿತ ಬೆಲೆ
ದೀಪಾವಳಿ ಹಾಗೂ ಸಂಕ್ರಾತಿ ಹಬ್ಬದ ನಂತರ ಮಾರುಕಟ್ಟೆಯಲ್ಲಿ ಬೆಲೆ ಏರಿಳಿತ ಸಾಮಾನ್ಯ. ಪ್ರಸ್ತುತ ಮಾರುಕಟ್ಟೆಯಲ್ಲಿ ಕಳೆದೊಂದು ವಾರದಿಂದ ಒಂದು ಕ್ವಿಂಟಾಲ್​ ರಾಶಿ ಅಡಕೆ ಬೆಲೆ 57 ಸಾವಿರ ರೂ. ಸಮೀಪದಲ್ಲಿದೆ. ಆದರೆ ಹಳ್ಳಿಗಳಲ್ಲಿ ಕೈವ್ಯಾಪಾರಿಗಳು ಮಾತ್ರ 55 ಸಾವಿರ ರೂ. ದಾಟುತ್ತಿಲ್ಲ. ಗ್ರಾಮಗಳಿಗೆ ದಿನವೂ ವ್ಯಾಪಾರಿಗಳು ಬರುತ್ತಾರೆ. ಆದರೆ ಯಾವೊಬ್ಬ ರೈತನೂ ಇವರಿಗೆ ಸೊಪ್ಪುಹಾಕುತ್ತಿಲ್ಲ.
ಗೋದಾಮುಗಳಲ್ಲಿ ಅಡಕೆ ಖಾಲಿ
ಬಹುತೇಕ ರೈತರು ಎರಡು ಮತ್ತು ಮೂರನೇ ಕೊಯ್ಲಿನ ರಾಶಿ ಅಡಕೆಯನ್ನು ಕ್ವಿಂಟಾಲ್​ಗೆ 65 ಸಾವಿರದಿಂದ 67ಸಾವಿರಕ್ಕೆ ಮಾರಾಟ ಮಾಡಿದ್ದಾರೆ. ಡಿಸೆಂಬರ್​ ಕೊನೆಯಲ್ಲಿ ನಾಲ್ಕನೇ ಕೊಯ್ಲು ಮುಕ್ತಾಯದ ಹಂತಕ್ಕೆ ಕ್ವಿಂಟಾಲ್​ಗೆ 50ರಿಂದ 52 ಸಾವಿರ ರೂ.ತಲುಪಿತ್ತು. ಮಾರುಕಟ್ಟೆಯಲ್ಲಿ ಕಳೆದೊಂದು ತಿಂಗಳಿನಿಂದ 57 ಸಾವಿರ ರೂ. ಆಸುಪಾಸಿದೆ. ಕೈವ್ಯಾಪಾರಿಗಳು ಖರೀದಿಸುವ ಭಾಗಶ@ ಅಡಕೆ ತೆರಿಗೆ ರಹಿತವಾಗಿ ಹೊರ ರಾಜ್ಯದ ಕಂಪನಿಗಳಿಗೆ ಸರಬರಾಜಾಗುತ್ತಿದೆ. ಭದ್ರಾವತಿ ಸೇರಿ ಪಕ್ಕದ ಚನ್ನಗಿರಿ, ಹೊನ್ನಾಳಿ ತಾಲೂಕಿನ ಬಹುತೇಕ ಅಡಕೆ ಕೈವ್ಯಾಪಾರ ಒಂದಿಬ್ಬರು ವರ್ತಕರ ಕೈಯಲ್ಲಿದೆ. ಹಳ್ಳಿಗಳಲ್ಲಿ ನಿರ್ಮಿಸಿರುವ ಖಾಸಗಿ ಅಡಕೆ ಗೋದಾಮುಗಳು ಖಾಲಿಯಾಗಿವೆ. ಕಳೆದೊಂದು ತಿಂಗಳಿನಿಂದ ಕೈ ವ್ಯಾಪಾರ ವಹಿವಾಟು ಸ್ಥಗಿತವಾಗಿದೆ.
ಅಡಮಾನ ಸಾಲ 5ಪಟ್ಟು ಹೆಚ್ಚಳ
ಅಡಕೆ ಕೊಯ್ಲು ಮುಗಿದು ಸಂಸ್ಕರಣೆಗೊಂಡು ಬೆಳೆಗಾರರ ಮನೆ ಜಗುಲಿ ಸೇರಿದೆ. ಇದರ ನಡುವೆ ಬಹುತೇಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಗಳು ಅಡಕೆ ಅಡಮಾನ ಸಾಲ ಆರಂಭಿಸಿರುವುದು ಬೆಳೆಗಾರರಿಗೆ ವರವಾಗಿ ಪರಿಣಮಿಸಿದೆ. ಕಳೆದೆರಡು ವರ್ಷಗಳಿಗೆ ಹೊಲಿಸಿದರೆ ಈ ಬಾರಿ ಅಡಕೆ ಅಡಮಾನ ಸಾಲ 5ಪಟ್ಟು ಹೆಚ್ಚಾಗಿದೆ. ಕೆಲ ಸಂಗಳಲ್ಲಿ ಗೋದಾಮುಗಳು ಅಡಕೆ ಚೀಲಗಳಿಂದ ತುಂಬಿಹೋಗಿವೆ. ಹೋಬಳಿ, ತಾಲೂಕು ಕೇಂದ್ರದ ಗೋದಾಮುಗಳಿಗೆ ಅಡಕೆ ಸಾಗಿಸಲಾಗುತ್ತಿದೆ. ಸಂಗಳಲ್ಲಿ ಒಂದು ಕ್ವಿಂಟಾಲ್​ ರಾಶಿ ಅಡಕೆ ಅಡಮಾನಕ್ಕೆ 35 ಸಾವಿರ ರೂ.ಗೆ ಶೇ 1.10 (ಒಂದು ರೂಪಾಯಿ ಹತ್ತು ಪೆಸೆ) ಬಡ್ಡಿ ದರ ನಿಗದಿಪಡಿಸಲಾಗಿದೆ. ಅಡಮಾನ ಸಾಲ ವಾಪಸ್​ ನೀಡಿ ಅಡಕೆ ತೆಗೆದುಕೊಂಡು ಹೋಗುವುದಾದರೆ ಲಕ್ಕೆ 600 ರೂ. ಹೆಚ್ಚುವರಿ ಹಣ ಪಡೆಯಲಾಗುತ್ತಿದೆ. ಅಡಮಾನ ಸಾಲ ಪಡೆದ ಸಂದಲ್ಲೇ ಅಡಕೆ ಮಾರಾಟ ಮಾಡಿದರೆ ಶುಲ್ಕ ವಿನಾಯಿತಿ ನೀಡಲಾಗುತ್ತಿದೆ.
ಅಡಕೆ ಬೆಳೆಗಾರರು ಅಡಮಾನ ಸಾಲ ಪಡೆದು ಅವಶ್ಯಕತೆಗಳನ್ನು ಪೂರೈಸಿಕೊಂಡು ಉತ್ಪನ್ನ ಉಳಿಸಿಕೊಳ್ಳುತ್ತಿರುವುದು ಆಶಾದಾಯಕ ಬೆಳವಣಿಗೆ. ಬಹುತೇಕ ಸಹಕಾರ ಸಂಗಳಲ್ಲಿ ಅಡಕೆ ವಹಿವಾಟು ನಿರೀೆಗೂ ಮೀರಿ ಹೆಚ್ಚಾಗಿದೆ. ಈ ಬಾರಿ 7 ಕೋಟಿ ರೂ.ಗಿಂತ ಹೆಚ್ಚು ಅಡಕೆ ಅಡಮಾನ ಸಾಲ ವಿತರಿಸಲಾಗಿದೆ. ಅಡಮಾನದ ಅಡಕೆಗೆ ಉತ್ತಮ ಬೆಲೆ ಸಿಗುತ್ತಿರುವುದರಿಂದ ಸಂದಲ್ಲೇ ಮಾರಾಟ ಮಾಡುತ್ತಿದ್ದಾರೆ.
> ರಮೇಶ್​ ಗೌಡ
ಆನವೇರಿ ಸಹಕಾರ ಸಂದ ಅಧ್ಯ
6 ಎಚ್​ಎಚ್​ಆರ್​ ರಮೇಶ್​ ಗೌಡ
ನಮ್ಮಲ್ಲಿ ಅಡಕೆ ಅಡಮಾನ ಸಾಲಕ್ಕೆ ಬೆಳೆಗಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಶೇಖರಣೆಗೆ ಗೋದಾಮುಗಳನ್ನು ವಿಸ್ತರಿಸಲಾಗುತ್ತಿದೆ. ಸಂದಲ್ಲಿ 4,500 ಕ್ವಿಂಟಾಲ್​ಗೂ ಅಧಿ-ಕ ಅಡಕೆ ಸಂಗ್ರಹವಾಗಿವೆ. ಬೆಳೆಗಾರರು ಸಾಧ್ಯವಾದಷ್ಟು ಮಾರುಕಟ್ಟೆಯಲ್ಲಿ ಅಡಕೆ ವಹಿವಾಟು ನಡೆಸಬೇಕು. ಕೆಲ ದಿನಗಳಿಂದ ಕೈವ್ಯಾಪಾರದ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ಅಡಕೆ ಸಂಸ್ಕರಣೆಯಲ್ಲಿ ಗುಣಮಟ್ಟ ಕಾಯ್ದುಕೊಳ್ಳದಿದ್ದರೆ ಇನ್ನೂ ಕೆಟ್ಟ ಪರಿಸ್ಥಿತಿ ಎದುರಿಸಬೇಕಾಗುತ್ತದೆ.
> ದೇವರಾಜ್​
ಯಡೇಹಳ್ಳಿ ಭದ್ರಾ ಸೌಹಾರ್ದ ಸಂದ ಅಧ್ಯ
6 ಎಚ್​ಎಚ್​ಆರ್​ ದೇವರಾಜ್​
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net