ತಾಲೂಕಿನಲ್ಲಿ ಕರೆಂಟ್ ಸಮಸ್ಯೆ ಇದ್ದು, ಒಮ್ಮೆ ಹೋದರೆ ವಾರ ಕಳೆದರೂ ಬರುವುದಿಲ್ಲ. ಯಡೂರು, ನಿಟ್ಟೂರು, ನಗರ, ಮಾಸ್ತಿಕಟ್ಟೆ ಭಾಗಗಳಲ್ಲಿ ಸಮಸ್ಯೆ ಅಧಿಕ. ಲೈನ್‌ಮನ್‌ಗಳಿಗೆ ಮೇಲಧಿಕಾರಿಗಳು ಸೂಚನೆ ನೀಡಬೇಕು. ರಸ್ತೆಯಲ್ಲಿರುವ ಅಪಾಯಕಾರಿ ಮರಗಳನ್ನು ತೆರವು ಮಾಡಬೇಕು. ಅಪಾಯ ಸಂಭವಿಸಿದರೆ ಅರಣ್ಯ ಅಧಿಕಾರಿಗಳನ್ನು ಹೊಣೆ ಮಾಡಲಾಗುವುದು ಎಂದು ತಿಳಿಸಿದರು.