ಕಾಂಗೋದಲ್ಲಿ ಶಿವಮೊಗ್ಗದ ಹಕ್ಕಿಪಿಕ್ಕಿಗಳು ಬಂಧಿ Hakkipikki tribe

ಶಿವಮೊಗ್ಗ: ಆಫ್ರಿಕಾದ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ಶಿವಮೊಗ್ಗ ತಾಲೂಕು ಸದಾಶಿಪುರ ಹಕ್ಕಿಪಿಕ್ಕಿ ಕ್ಯಾಂಪ್‌ನ 70 ಜನರನ್ನು ಬಂಧಿಸಿದ್ದು, ಹಕ್ಕಿಪಿಕ್ಕಿ ಬುಡಕಟ್ಟಿನವರು ಕಾಂಗೋ ದೇಶದ ವಲಸೆ ಅಧಿಕಾರಿಗಳ ವಶದಲ್ಲಿದ್ದಾರೆ.
Hakkipikki tribe
ಕಾಂಗೋ ದೇಶದಲ್ಲಿ ಸಿಲುಕಿರುವ ಶಿವಮೊಗ್ಗದ ಹಕ್ಕಿಪಿಕ್ಕಿ ಜನಾಂಗದವರು.
Published on: 

ಶಿವಮೊಗ್ಗ: ಆಫ್ರಿಕಾದ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ಶಿವಮೊಗ್ಗ ತಾಲೂಕು ಸದಾಶಿಪುರ ಹಕ್ಕಿಪಿಕ್ಕಿ ಕ್ಯಾಂಪ್‌ನ 70 ಜನರನ್ನು ಬಂಧಿಸಿದ್ದು, ಹಕ್ಕಿಪಿಕ್ಕಿ ಬುಡಕಟ್ಟಿನವರು ಕಾಂಗೋ ದೇಶದ ವಲಸೆ ಅಧಿಕಾರಿಗಳ ವಶದಲ್ಲಿದ್ದಾರೆ.

ಅಲ್ಲಿನ ಏಜೆಂಟರು 5 ಲಕ್ಷ ರೂ. ಪಡೆದು ವಂಚನೆ ಮಾಡಿದ್ದಾರೆಂದು ಬಂಧಿತರು ಆರೋಪಿಸಿದ್ದಾರೆ. ನಕಲಿ ದಾಖಲೆ ಬಳಕೆ, ಪ್ರವಾಸಿ ವೀಸಾದಲ್ಲಿ ವ್ಯಾಪಾರ ಮಾಡಿದ್ದೇ ಬಂಧನಕ್ಕೆ ಪ್ರಮುಖ ಕಾರಣವಾಗಿದೆ. ಹಣ ಪಡೆದು ಪರಾರಿಯಾಗಿರುವ ಏಜೆಂಟರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಸಂತ್ರಸ್ತರು ಆಗ್ರಹಿಸಿದ್ದಾರೆ.

ಬಂಧಿತರಿಗೆ ಕಾನೂನು, ಆಹಾರ, ವೈದ್ಯಕೀಯ ನೆರವು ನೀಡಿ ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ಮನವಿ ಮಾಡಿದ್ದು, ತಮ್ಮನ್ನು ವಾಪಸ್ ಕರೆಸಿಕೊಳ್ಳಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ತಕ್ಷಣ ಮಧ್ಯಪ್ರವೇಶಿಸುವಂತೆ ಕರ್ನಾಟಕ ಹಕ್ಕಿಪಿಕ್ಕಿ ಬುಡಕಟ್ಟು ಸಂಘಟನೆ ಮನವಿ ಮಾಡಿದೆ.

ಈ ಕುರಿತು ಆದಿವಾಸಿ ಬುಡಕಟ್ಟು ಮಹಾಸಭಾ ರಾಜ್ಯಾಧ್ಯಕ್ಷ ಜಗ್ಗು ಮಾತನಾಡಿ, ಬುಡಕಟ್ಟು ಜನಾಂಗದವರು ಹೊಟ್ಟೆಪಾಡಿಗಾಗಿ ವಿದೇಶಗಳಿಗೆ ಹೋಗುತ್ತಾರೆ. ಶಿವಮೊಗ್ಗ ಮತ್ತು ಚನ್ನಗಿರಿಯ ಬುಡಕಟ್ಟು ಜನಾಂಗದವರು ಕಾಂಗೋ ದೇಶಕ್ಕೆ ಹೋಗಿ ಸಿಲುಕಿಕೊಂಡು ಆಂತಕಕ್ಕೊಳಗಾಗಿದ್ದಾರೆ. ತಕ್ಷಣ ಅವರನ್ನು ಭಾರತಕ್ಕೆ ಕರೆತರಲು ಸರ್ಕಾರಗಳು ಸಹಾಯ ಮಾಡಬೇಕಿದೆ. ನಮ್ಮವರನ್ನು ರಕ್ಷಣೆ ಮಾಡಿ ಭಾರತಕ್ಕೆ ಕರೆತರಬೇಕು ಎಂದು ಒತ್ತಾಯಿಸಿದ್ದಾರೆ.