ಪಶ್ಚಿಮಟ್ಟಕ್ಕೆ ಮಾರಕವಾದ ಕಸ್ತೂರಿ ರಂಗನ್​ ವರದಿ ಕೈಬಿಡಿ

ಕಸ್ತೂರಿ ರಂಗನ್​ ವರದಿ ವಿರೋಧಿಸಿ ಮಲೆನಾಡು ಹೋರಾಟ ಕ್ರಿಯಾಸಮಿತಿಯಿಂದ ತೀರ್ಥಹಳ್ಳಿ ತಹಸೀಲ್ದಾರ್​ ಎಸ್​.ರಂಜಿತ್​ ಅವರಿಗೆ ಮನವಿ ಸಲ್ಲಿಸಲಾಯಿತು. ಪ್ರೊ. ಜೆ.ಎಲ್​.ಪದ್ಮನಾಭ್​, ಸುಂದರೇಶ್​, ದಿನೇಶ್​ ಇತರರಿದ್ದರು.
ಕಸ್ತೂರಿ ರಂಗನ್​ ವರದಿ ವಿರೋಧಿಸಿ ಮಲೆನಾಡು ಹೋರಾಟ ಕ್ರಿಯಾಸಮಿತಿಯಿಂದ ತೀರ್ಥಹಳ್ಳಿ ತಹಸೀಲ್ದಾರ್​ ಎಸ್​.ರಂಜಿತ್​ ಅವರಿಗೆ ಮನವಿ ಸಲ್ಲಿಸಲಾಯಿತು. ಪ್ರೊ. ಜೆ.ಎಲ್​.ಪದ್ಮನಾಭ್​, ಸುಂದರೇಶ್​, ದಿನೇಶ್​ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಲೆನಾಡು ಹೋರಾಟ ಕ್ರಿಯಾಸಮಿತಿ ಆಗ್ರಹ
  • ತೀರ್ಥಹಳ್ಳಿಯಲ್ಲಿ ತಹಸೀಲ್ದಾರ್​ಗೆ ಮನವಿ ಸಲ್ಲಿಕೆ
  • ಜಿಲ್ಲಾಧಿಕಾರಿ ಕಚೇರಿ ಎದುರು ಹೋರಾಟ ನಡೆಸಲು ತೀರ್ಮಾನ
ತೀರ್ಥಹಳ್ಳಿ: ಕಸ್ತೂರಿ ರಂಗನ್​ ವರದಿ ಕೈಬಿಡುವಂತೆ ಆಗ್ರಹಿಸಿ ಮಲೆನಾಡು ಹೋರಾಟ ಕ್ರಿಯಾಸಮಿತಿಯಿಂದ ಸೋಮವಾರ ತಾಲೂಕು ಕಚೇರಿ ಎದುರು ಬೃಹತ್​ ಪ್ರತಿಭಟನೆ ನಡೆಸಿ ತಹಸೀಲ್ದಾರ್​ಗೆ ಮನವಿ ಸಲ್ಲಿಸಲಾಯಿತು.
ಮಲೆನಾಡು ಹೋರಾಟ ಕ್ರಿಯಾಸಮಿತಿ ಸಂಚಾಲಕ ನೆಂಪೆ ದೇವರಾಜ್​ ಮಾತನಾಡಿ, ರಾಜಕೀಯ ಮುಖಂಡರು ವರದಿಯನ್ನು ತಮಗೆ ಅನುಕೂಲವಾಗುವಂತೆ ಬಳಸಿಕೊಳ್ಳುತ್ತಿದ್ದಾರೆ. ಸೂಕ್ಷ$್ಮ ಸಂಗತಿಗಳ ಬಗ್ಗೆ ಜನರು ಎಚ್ಚೆತ್ತಕೊಳ್ಳದಿದ್ದರೆ ಮಲೆನಾಡು ರ್ನಿಜನ ಪ್ರದೇಶ ಆಗಲಿದೆ. ವರದಿ ವಿರೋಧಿಸಿ ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿ ಎದುರು ಅವಿರತ ಹೋರಾಟ ನಡೆಸಲು ತಿರ್ಮಾನಿಸಿದ್ದು, ಹೋರಾಟಕ್ಕೆ ಎಲ್ಲರ ಬೆಂಬಲ ಅಗತ್ಯ ಎಂದು ಹೇಳಿದರು.
ಅಡಿಕೆಗೆ ತಗುಲಿರುವ ರೋಗಬಾಧೆಯಿಂದ ತೂಕ ಮಾಡುವ ಬದಲು ಅಡಿಕೆ ಕಾಯಿ ಲೆಕ್ಕ ಹಾಕುವ ಸ್ಥಿತಿ ಬಂದಿದೆ. ಪರಿಸರ ಸೂ$್ಮ ವಲಯದ ನೆಪದಲ್ಲಿ ಅಡಿಕೆಗೆ ಔಷಧ ಸಿಂಪರಣೆಗೆ ತಡೆ ಮತ್ತು ರಸಗೊಬ್ಬರ ಹಾಕದಂತೆ ರ್ನಿಬಂಧ ಹೇರುವ ಪ್ರಯತ್ನ ನಡೆದಿದೆ. ರಸಗೊಬ್ಬರ ಹಾಕದೆ ಬೆಳೆ ಬೆಳೆಯುವುದು ಅಸಾಧ್ಯ ಎಂದರು.
ಪ್ರೊ. ಜೆ.ಎಲ್​.ಪದ್ಮನಾಭ್​ ಮಾತನಾಡಿ, ಕಸ್ತೂರಿ ರಂಗನ್​ ವರದಿ ಮಲೆನಾಡಿಗೆ ಮರಣ ಶಾಸನವಾಗಿದೆ. ಮಲೆನಾಡಿನ ಜನರ ಬೆನ್ನಿಗೆ ಇರಿಯುವ ವರದಿ ವಿರೋಧಿಸಬೇಕು. ಹೋರಾಟದ ನೇತೃತ್ವವನ್ನು ಯುವಜನತೆ ವಹಿಸಬೇಕು ಎಂದು ಹೇಳಿದರು.
ಶಿವಾನಂದ ಕರ್ಕಿ ಮಾತನಾಡಿ, ಕಸ್ತೂರಿ ರಂಗನ್​ ವರದಿಯಂತಹ ಕರಾಳ ಮಸೂದೆ ಪ್ರಶ್ನಿಸಲಾಗುತ್ತಿಲ್ಲ. ಶಾಸನ ಮಾಡುವ ಜನಪ್ರತಿನಿಧಿಗಳಿಗೆ ಜನರ ಸಮಸ್ಯೆ ಮರೆತು ಹೋಗಿದೆ. ಸದನದಲ್ಲಿ ಈ ಬಗ್ಗೆ ಚಕಾರ ಎತ್ತದೆ ಧಾರ್ಮಿಕ ವಿಚಾರಗಳ ಮೂಲಕ ಜನರು ಪ್ರಶ್ನೆ ಮಾಡದಂತೆ ಗಮನವನ್ನು ಬೇರೆಡೆ ಸೆಳೆಯಲಾಗುತ್ತಿದೆ. ಈಗ ಮೈಮರೆತರೆ ಭವಿಷ್ಯ ಕರಾಳವಾದೀತು ಎಂದು ತಿಳಿಸಿದರು.
ಮಲೆನಾಡು ಹೋರಾಟ ಕ್ರಿಯಾಸಮಿತಿ ಅಧ್ಯ ಸುಂದರೇಶ್​, ದಿನೇಶ್​, ಅಶೋಕ್​, ದಿವಾಕರ್​, ಈಶ್ವರ್​, ಸುಧಾಕರ್​, ದೇವರಾಜ್​, ಕಿರಣ್​ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net