ಸಮುದಾಯದ ಸಹಭಾಗಿತ್ವ ಮುಖ್ಯ

ಸೊರಬ: ಸರ್ಕಾರಿ ಶಾಲೆಗಳ ಪ್ರಗತಿಗೆ ಸಮುದಾಯದ ಸಹಭಾಗಿತ್ವ ಅತ್ಯಂತ ಮುಖ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪುಷ್ಪಾ ಹೇಳಿದರು.
Smart class
ಸೊರಬ ತಾಲೂಕಿನ ಹೊಳೆಮರೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಬಿಇಒ ಪುಷ್ಪಾ ಮಾತನಾಡಿದರು. ರಾಘವೇಂದ್ರ, ದಯಾನಂದ ಕಲ್ಲೇರ್ ಇತರರಿದ್ದರು.
Published on: 

ಸೊರಬ: ಸರ್ಕಾರಿ ಶಾಲೆಗಳ ಪ್ರಗತಿಗೆ ಸಮುದಾಯದ ಸಹಭಾಗಿತ್ವ ಅತ್ಯಂತ ಮುಖ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪುಷ್ಪಾ ಹೇಳಿದರು.

ಹೊಳೆಮರೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ನೂತನ ಸ್ಮಾರ್ಟ್ ಕ್ಲಾಸ್, ಸಿಸಿಟಿವಿ ಉದ್ಘಾಟನೆ, ದಾನಿಗಳ ಕೊಡುಗೆ ಸಮಾರಂಭದಲ್ಲಿ ಸ್ಮಾರ್ಟ್‌ಕ್ಲಾಸ್ ಉದ್ಘಾಟಿಸಿ ಮಾತನಾಡಿ, ಆಧುನಿಕ ಯುಗದಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳಿಗೂ ಡಿಜಿಟಲ್ ಶಿಕ್ಷಣದ ಸವಲತ್ತು ದೊರೆಯಬೇಕು. ಸರ್ಕಾರದ ಸೌಲಭ್ಯಗಳ ಜತೆ ದಾನಿಗಳು, ಪಾಲಕರು ಕೈಜೋಡಿಸಬೇಕು ಎಂದು ತಿಳಿಸಿದರು.

ನಿವೃತ್ತ ಶಿಕ್ಷಕ ಜಿ.ಬಿ.ಕೃಷ್ಣಮೂರ್ತಿ 5,000 ರೂ. ಮೌಲ್ಯದ ಕುಡಿಯುವ ನೀರಿನ ಸ್ಟಾೃಂಡ್ ಕೊಡುಗೆಯಾಗಿ ನೀಡಿದರು. ಬಿಳಾಗಿ ಗಣಪತಪ್ಪ, ಹಿರೇಕೆರೂರು ಮಲ್ಲನಗೌಡ ಕೋರಿಗೌಡರ ಕುಟುಂಬಸ್ಥರು ಹಾಗೂ ಚಂದ್ರಗುತ್ತಿಯ ಕಮಲಮ್ಮ ಹಾಗೂ ಸುಬ್ಬರಾವ್ ಕುಟುಂಬಸ್ಥರು ತಲಾ ಐದು ಕುರ್ಚಿಗಳನ್ನು ಶಾಲೆಗೆ ದಾನವಾಗಿ ನೀಡಿದರು. ರಾಜು ಹಿರಿಯಾವಲಿ ಗ್ರೀನ್ ಬೋರ್ಡ್ ನೀಡಿದರು.

ಎಸ್‌ಡಿಎಂಸಿ ಅಧ್ಯಕ್ಷ ರಾಘವೇಂದ್ರ, ಸಮನ್ವಯಾಧಿಕಾರಿ ದಯಾನಂದ ಕಲ್ಲೇರ್, ಉಪನ್ಯಾಸಕ ಮಹೇಶ್, ಮುಖ್ಯಶಿಕ್ಷಕ ಎಚ್.ಎಸ್.ಪ್ರಭಾಕರ್, ಸಿಆರ್‌ಪಿ ರಾಘವೇಂದ್ರ, ಶಿಕ್ಷಕಿ ಅರ್ಚನಾ ಇತರರಿದ್ದರು.