

ಶಿಕಾರಿಪುರ: ಪಟ್ಟಣ ಹೊರವಲಯದಲ್ಲಿರುವ ಶಾಹಿ ಗಾರ್ಮೆಂಟ್ಸ್ ಘಟಕದ ಕಾರ್ಮಿಕರು ಎದುರಿಸುತ್ತಿದ್ದ ಭವಿಷ್ಯ ನಿಧಿ (ಪಿಎ್) ಹಾಗೂ ಇಎಸ್‌ಐ ಸೌಲಭ್ಯಗಳಿಗೆ ಸಂಬಂಧಿಸಿದ ಗೊಂದಲಗಳಿಗೆ ಸಂಸದ ಬಿ.ವೈ.ರಾಘವೇಂದ್ರ ತೆರೆ ಎಳೆದರು.
ಇತ್ತೀಚೆಗೆ ಗಾರ್ಮೆಂಟ್ಸ್‌ನ ಕಾರ್ಮಿಕರು ತಮಗೆ ಸರಿಯಾಗಿ ಪಿಎ್ ಹಣ ಜಮೆಯಾಗುತ್ತಿಲ್ಲ ಹಾಗೂ ಇಎಸ್‌ಐ ವೈದ್ಯಕೀಯ ಸೌಲಭ್ಯ ಸಮರ್ಪಕವಾಗಿ ಸಿಗುತ್ತಿಲ್ಲ ಎಂದು ಆರೋಪಿಸಿ ಎರಡು ದಿನಗಳ ಕಾಲ ಪ್ರತಿಭಟನೆ ನಡೆಸಿದ್ದರು. ಹಾಗಾಗಿ ಗಾರ್ಮೆಂಟ್ಸ್‌ಗೆ ಭೇಟಿ ನೀಡಿದ ಸಂಸದರು ಮಂಗಳವಾರ ಕಾರ್ಮಿಕ ಇಲಾಖೆ, ಭವಿಷ್ಯ ನಿಧಿ, ಇಎಸ್‌ಐ ಅಧಿಕಾರಿಗಳು, ಕಾರ್ಮಿಕರನ್ನು ಒಳಗೊಂಡು ಸಭೆ ನಡೆಸಿದರು.
ಪಿಎ್ ಹಾಗೂ ಇಎಸ್‌ಐ ನಿಯಮಾವಳಿಗೆ ಸಂಬಂಧಿಸಿ ಕಾರ್ಮಿಕರ ಹಲವು ಪ್ರಶ್ನೆಗಳು, ಗೊಂದಲಗಳಿಗೆ ಸಂಬಂಧಿಸಿದ ಅಧಿಕಾರಿಗಳಿಂದ ನೇರವಾಗಿ ಸ್ಪಷ್ಟನೆ ಕೊಡಿಸಿದರು. ಕಾರ್ಮಿಕರ ಪಿಎ್ ಖಾತೆ ನಿರ್ವಹಣೆ, ವೈದ್ಯಕೀಯ ಸೌಲಭ್ಯ ಹೇಗೆ ಪಡೆಯಬೇಕು ಎಂಬುದರ ಕುರಿತು ಸೂಕ್ತ ಮಾರ್ಗದರ್ಶನ ನೀಡಿದರು.
ಬಿ.ವೈ.ರಾಘವೇಂದ್ರ ಮಾತನಾಡಿ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಕಾರ್ಮಿಕರ ವೇತನ, ಸಾಮಾಜಿಕ ಭದ್ರತೆ, ಸದೃಢ ಆರೋಗ್ಯ ಮತ್ತು ಕಲ್ಯಾಣ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿದೆ. ಅಭಿವೃದ್ಧಿ ಪರ ಹಲವು ಸುಧಾರಣೆಗಳನ್ನು ಜಾರಿಗೆ ತರಲಾಗಿದೆ. ಈ ಎಲ್ಲದರ ಪ್ರಯೋಜನ ಪ್ರತಿಯೊಬ್ಬ ಕಾರ್ಮಿಕನಿಗೂ ತಲುಪಬೇಕು ಎಂದರು.
ಪಿಎ್ ಪ್ರಾದೇಶಿಕ ಆಯುಕ್ತೆ ಜೀಸೆನ, ಜಾರಿ ಅಧಿಕಾರಿ ರವೀಂದ್ರ, ಇಎಸ್‌ಐ ವ್ಯವಸ್ಥಾಪಕಿ ಆಶಾದೇವಿ, ಎಸ್‌ಎಸ್‌ಒ ಪ್ರಿಯಾನ್ಶು ಚೌಧರಿ, ಕಾರ್ಮಿಕ ಅಧಿಕಾರಿ ರಘುನಾಥ್ ಇತರರಿದ್ದರು.