ಶಿವಮೊಗ್ಗದಲ್ಲಿ 1,88,554 ಮತದಾರರು ಔಟ್ I voters out from list
ಎಸ್‌ಐಆರ್ ಪ್ರಕ್ರಿಯೆಯಲ್ಲಿ ನಿರತರಾಗಿರುವ ಚುನಾವಣಾ ಸಿಬ್ಬಂದಿ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಜಿಲ್ಲೆಯಲ್ಲಿ ಮತದಾರರ ಪಟ್ಟಿಯಲ್ಲಿದ್ದ ಮೃತರ ಸಂಖ್ಯೆ 46,683
ಎಸ್‌ಐಆರ್ ಮೊದಲ ಹಂತ ಪೂರ್ಣ ಕರಡಿನತ್ತ ಚಿತ್ತ
ಶಿವಮೊಗ್ಗ: ಎಸ್‌ಐಆರ್ (ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ) (sir) ಪ್ರಕ್ರಿಯೆಯ ಮೊದಲ ಹಂತ ಸೋಮವಾರ ಮುಕ್ತಾಯವಾಗಿದೆ. ಜಿಲ್ಲೆಯ ಒಟ್ಟು 15,19,439 ಮತದಾರರ ಪೈಕಿ 1,88,554 (ಶೇ.12.41) ಮತದಾರರ (voters) ಹೆಸರುಗಳು ಕರಡು ಪಟ್ಟಿಯಲ್ಲಿ (draft) ಬಿಟ್ಟು ಹೋಗುವ ಸಾಧ್ಯತೆಯಿದೆ.
ಜಿಲ್ಲೆಯಲ್ಲಿ ಎಎಸ್‌ಡಿಡಿಒ (ಅನುಮಾನಸ್ಪದ/ಸ್ಥಳಾಂತರಗೊಂಡ/ಮೃತಪಟ್ಟ/ಎರಡು ಕಡೆಗಳಲ್ಲಿ ನೋಂದಣಿ) ಮತದಾರರ ಸಂಖ್ಯೆ 1,88,554 ಎಂದು ದಾಖಲು ಮಾಡಲಾಗಿದೆ. ಇದರಲ್ಲಿ ಮೃತಪಟ್ಟವರ ಸಂಖ್ಯೆಯೇ 46,683 ಎಂಬುದು ವಿಶೇಷ.
ಬಿಎಲ್‌ಒಗಳು ಇ-ಫಾರ್ಮ್ ವಿತರಿಸಲು ಮೂರು ಬಾರಿ ಮನೆಗಳಿಗೆ ಭೇಟಿ ನೀಡಿದಾಗಲೂ ಮೃತಪಟ್ಟ 46,552 ಮತದಾರರನ್ನು ಹೊರತುಪಡಿಸಿ ಉಳಿದ 1,41,871 ಜನರ ಮಾಹಿತಿ ಲಭ್ಯವಾಗಿಲ್ಲ. ಇವರು ಕರಡು ಪಟ್ಟಿಯಿಂದ ಹೊರಗುಳಿಯುವುದು ನಿಶ್ಚಿತ.
ಬಾಡಿಗೆ ನಿವಾಸದಲ್ಲಿದ್ದವರು ಬೇರೆ ಬಡಾವಣೆ ಅಥವಾ ಊರುಗಳಿಗೆ ಸ್ಥಳಾಂತರವಾಗಿದ್ದಾರೆ. ಅವರ ಬಗ್ಗೆ ಅಕ್ಕಪಕ್ಕದವರಿಗೂ ಮಾಹಿತಿಯಿಲ್ಲ. ಆದರೆ ಅವರು ಈ ಹಿಂದೆ ಇದ್ದ ಸ್ಥಳದಲ್ಲಿನ ಮತದಾರರ ಚೀಟಿ ರದ್ದುಪಡಿಸಿಕೊಂಡಿಲ್ಲ. ಅವರ ಪತ್ತೆಗೆ ಬಿಎಲ್‌ಒಗಳು ಮಾಡಿದ ಎಲ್ಲ ಪ್ರಯತ್ನಗಳು ವಿಫಲವಾಗಿವೆ.
ರಾಜಕೀಯ ಪಕ್ಷಗಳು ಈ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡು ತಮ್ಮ ಪಕ್ಷದ ವೋಟ್‌ಬ್ಯಾಂಕ್ ರಕ್ಷಿಸಿಕೊಳ್ಳುವ ಕೆಲಸ ಮಾಡಿದ್ದವು. ಹೀಗಾಗಿ ಎಎಸ್‌ಡಿಡಿಒ ಮತದಾರರ ಸಂಖ್ಯೆಯಲ್ಲಿ ಹೆಚ್ಚಿನ ಬದಲಾವಣೆ ಆಗುವುದು ಅನುಮಾನ ಎಂಬುದು ಅಧಿಕಾರಿಗಳ ಅನಿಸಿಕೆ.
ಇನ್ನೂ ಅವಕಾಶವಿದೆ
ಮತದಾರರ ಕರಡು ಪಟ್ಟಿಯನ್ನು ಆ.24ಕ್ಕೆ ಪ್ರಕಟಿಸಲಾಗುತ್ತದೆ. ಅದನ್ನು ಪರಿಶೀಲಿಸಿದ ಬಳಿಕ ಹೆಸರು ಸೇರ್ಪಡೆಯಾಗಿಲ್ಲ ಎಂಬುದು ಖಾತ್ರಿಯಾದರೆ ಮಾಹಿತಿ ನೀಡಲು ಸಾರ್ವಜನಿಕರಿಗೆ ಅವಕಾಶವಿದೆ. ಈಗಿನ ಪರಿಸ್ಥಿತಿ ಗಮನಿಸಿದರೆ ಕರಡು ಮತದಾರರ ಪಟ್ಟಿಗೆ ದೊಡ್ಡ ಮಟ್ಟದಲ್ಲಿ ಹೆಸರು ಸೇರ್ಪಡೆಯಾಗುವ ಸಾಧ್ಯತೆಗಳಿಲ್ಲ.