ಜಿಲ್ಲೆಯಲ್ಲಿ 15,164 ಮಂದಿ ಮ್ಯಾಪಿಂಗ್‌ಗೆ ಒಳಪಟ್ಟಿಲ್ಲ. ಇವರು ಆಕ್ಷೇಪಣೆ ಸಲ್ಲಿಸುವ ಸಂದರ್ಭದಲ್ಲಿ 2002ರ ಮತಪಟ್ಟಿಯಲ್ಲಿದ್ದ ತಂದೆ, ತಾಯಿ, ತಾತ, ಪತಿ ಅಥವಾ ಪತ್ನಿ ಮಾಹಿತಿ ಒದಗಿಸಬೇಕು. 33,504 ಮತದಾರರ ಹೆಸರು, ತಂದೆ ಹಾಗೂ ಮಗನ ನಡುವಿನ ವಯಸ್ಸಿನಲ್ಲಿ ವ್ಯತ್ಯಾಸ ಹೀಗೆ ಅನೇಕ ಅಸಹಜತೆಗಳು ಕಂಡುಬಂದಿವೆ. ಇವರು ಚುನಾವಣಾ ಆಯೋಗ ಸೂಚಿಸಿರುವ ದಾಖಲೆಗಳ ಪೈಕಿ ಯಾವುದಾದರೂ ಒಂದು ದಾಖಲೆ ಒದಗಿಸಬೇಕು. ಇನ್ನು ಮುಂದೆ ಹೆಸರು ಸೇರ್ಪಡೆ, ತಿದ್ದುಪಡಿಗೂ ಅವಕಾಶವಿದೆ. ಇದಕ್ಕೆ ಸಂಬಂಧಿಸಿದ ಅರ್ಜಿ ನಮೂನೆ ನೀಡಿ ಸೇವೆ ಪಡೆದುಕೊಳ್ಳಬಹುದು.