ಶಿರಹಟ್ಟಿ ದ್ಯಾಮವ್ವದೇವಿ ಜಾತ್ರೆ ಸಂಪನ್ನ

26srt-3 JATRE
Published on

ಶಿರಹಟ್ಟಿ: ಮೂರು ದಿನಗಳಿಂದ ವಿವಿಧ ಧಾರ್ವಿುಕ ಕಾರ್ಯ, ಗ್ರಾಮ ಸಂಚಾರ, ಧರ್ಮಸಭೆ ಇತ್ಯಾದಿ ಕಾರ್ಯಕ್ರಮಗಳ ಮೂಲಕ ಗುರುವಾರ ಪಟ್ಟಣದ ಅಧಿದೇವತೆ ದ್ಯಾಮವ್ವದೇವಿಯ ಜಾತ್ರೋತ್ಸವ ಅದ್ದೂರಿಯಾಗಿ ಸಂಪನ್ನಗೊಂಡಿತು.
ಆನೆ ಅಂಬಾರಿ, ವೀರಗಾಸೆ, ಡೊಳ್ಳು, ನಂದಿಧ್ವಜ, ಸಮ್ಮಾಳ, ಇತ್ಯಾದಿ ವಾದ್ಯವೈಭವದೊಂದಿಗೆ ನೆರೆದ ಸಾವಿರಾರು ಭಕ್ತರ ಉಧೋ.. ಉಧೋ.. ಉದ್ಘೋಷದ ಮಧ್ಯೆ ದೇವಿಯನ್ನು ಚೌತಮನಿ ಕಟ್ಟೆಯಿಂದ ಮೆರವಣಿಗೆ ಮೂಲಕ ಮೂಲಸ್ಥಾನ ದೇವಸ್ಥಾನಕ್ಕೆ ಕರೆತಂದು ಸಕಲ ಪೂಜಾದಿ ಕಾರ್ಯಗಳೊಂದಿಗೆ ಪ್ರತಿಷ್ಠಾಪಿಸಲಾಯಿತು.
ದೇವಸ್ಥಾನದಲ್ಲಿ ಅರ್ಚಕ ಗುರುನಾಥ ಭಟ್ಟರ ನೇತೃತ್ವದಲ್ಲಿ ಬೆಳಗ್ಗೆ ಶ್ರೀ ದುರ್ಗಾ ಹೋಮ ನಡೆಯಿತು. ಬಳಿಕ ಲಕ್ಷ್ಮಣ ಕುಸ್ಲಾಪೂರ, ಚಂದ್ರು, ವೀರಬಸಪ್ಪ ಕುಸ್ಲಾಪೂರ ಅವರ ವೀರಗಾಸೆ ನೃತ್ಯ, ಒಡಪು, ಶಸ್ತ್ರಧಾರಣೆ ನೋಡುಗರನ್ನು ರೋಮಾಂಚನಗೊಳಿಸಿತು. ಶಿರಹಟ್ಟಿ ಸೇರಿ ನೆರೆಯ ಗ್ರಾಮದ ಭಕ್ತರು ದೇವಿಗೆ ಉಡಿ ತುಂಬಿ, ಹರಕೆ ಸಲ್ಲಿಸಿ ಕೃತಾರ್ಥರಾದರು. ಬಳಿಕ ಅನ್ನ ಸಂತರ್ಪಣೆ ನಡೆಯಿತು. ಮುತ್ತಣ್ಣ ಬಡಿಗೇರ, ಐ.ಜೆ. ಬಡಿಗೇರ, ಎನ್.ಆರ್. ಕುಲಕರ್ಣಿ, ಅಜ್ಜನಗೌಡ ಪಾಟೀಲ, ಆರ್.ಬಿ. ಕಮತ, ಸಿ.ಸಿ. ನೂರಶೆಟ್ಟರ, ಸುರೇಶ ವರವಿ, ಎಂ.ಸಿ. ಹಿರೇಮಠ, ಬಸವರಾಜ ಬೋರಶೆಟ್ಟರ, ಅಮೃತ ಭಾತಖಂಡೆ, ಹೊನ್ನಪ್ಪ ಶಿರಹಟ್ಟಿ, ಸುರೇಶ ಕಪ್ಪತ್ತನವರ, ಬಸವರಾಜ ಹೊಸೂರ, ಪ್ರಕಾಶ ಬೋರಶೆಟ್ಟರ, ಗಣಪತಿ ಬಡಿಗೇರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net