

ಬೆಂಗಳೂರು: ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ದೇಶದ ಅತೀ ಹಳೆಯ ಮತ್ತು ಪ್ರತಿಷ್ಠಿತ ಗ್ರಂಥಾಲಯ ಸಂಘಗಳಲ್ಲಿ ಒಂದಾದ ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘ (ರಿ), ಪ್ರಖ್ಯಾತ ಗ್ರಂಥಾಲಯ ತಜ್ಞ ಡಾ. ಎಸ್.ಆರ್. ರಂಗನಾಥನ್ ಅವರಿಂದ ಸ್ಥಾಪಿಸಲ್ಪಟ್ಟಿದ್ದು, ಸಂಘದ ಸಾಮಾನ್ಯ ಸಭೆಯಲ್ಲಿ ನಡೆದ ಚುನಾವಣೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಮುಂದಿನ ಎರಡು ವರ್ಷಗಳ ಅವಧಿಗೆ ಕಾರ್ಯನಿರ್ವಹಿಸಲು ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು ಗ್ರಂಥಾಲಯ ವಿಜ್ಞಾನ ಮತ್ತು ಗ್ರಂಥಾಲಯ ವೃತ್ತಿಪರರ ನಡುವೆ ಪರಿಣತಿ ವೃದ್ಧಿಯನ್ನು ಉತ್ತೇಜಿಸಲು ಬದ್ಧವಾಗಿದೆ ಎಂದಯ ಸಂಘವು ತಿಳಿಸಿದೆ.
ಡಾ.ಎಸ್.ಎಲ್.ಕಾಡದೇವರಮಠ ಅಧ್ಯಕ್ಷರಾಗಿ, ಡಾ. ನಾಗಪ್ಪ ಬಕ್ಕಣ್ಣನವರ್, ಡಾ. ಸುಭಾಷ್ ರೆಡ್ಡಿ ಬಿ ಉಪಾಧ್ಯಕ್ಷರಾಗಿ, ಡಾ. ಶೇಖರ ಎಚ್.ಪಿ. ಪ್ರಧಾನ ಕಾರ್ಯದರ್ಶಿಯಾಗಿ, ಡಾ. ಪ್ರಕಾಶ್ ಐ.ಎನ್. ಮತ್ತು ಡಾ. ರೂಪೇಶ್ ಕುಮಾರ್ ಸಹ ಕಾರ್ಯದರ್ಶಿಗಳಾಗಿ ಹಾಗೂ ಡಾ. ಮೀರಾಮಣಿ ಎನ್. ಖಜಾಂಚಿಯಾಗಿ ಆಯ್ಕೆಯಾಗಿದ್ದಾರೆ.