

ವಿಜಯಪುರ : ಇಲ್ಲಿನ ಎಸ್‌ಬಿಜೆ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಜಿಲ್ಲಾಮಟ್ಟದ ಯುವಜನೋತ್ಸವದಲ್ಲಿ ಉತ್ತಮ ಸಾಧನೆಗೈದಿದ್ದಾರೆ.
ನಗರದ ಬಿಎಲ್‌ಡಿಇ ಸಂಸ್ಥೆಯ ಎ.ಎಸ್. ಪಾಟೀಲ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಜಿಲ್ಲಾಡಳಿತ, ಜಿಪಂ ಯುವ ಸಮಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ನೆಹರು ಕೇಂದ್ರ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಯುವಜನೋತ್ಸವದ ನಾಲ್ಕು ಸ್ಪರ್ಧೆಗಳಲ್ಲಿ ವಿಜೇತರಾಗಿ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿದ್ದಾರೆ.
ಜಾನಪದ ಗೀತೆಯಲ್ಲಿ ಪರಮೇಶ್ವರ್ ರೊಟ್ಟಿ, ಅಮಿತ ಜಮದಾಡೆ, ಅಭಿಷೇಕ್ ಶೇಗುಣಶಿ, ಗಜಾನಂದ ವಾಣಿ, ವಿಲಾಸ ಜಾಧವ, ಅರವಿಂದ ವಜ್ಜಲ್, ಸಂಭಾಜಿ ನಿಕ್ಕಂ, ಸುಭಾಸ ಮೇಡೆಗಾರ್, ಗಂಗಾಧರ ನಾಯ್ಕೋಡಿ ಮತ್ತು ಶಂಕರಲಿಂಗ ಪಡಗಾನೂರ ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಇನ್ನು ಜಾನಪದ ನೃತ್ಯದಲ್ಲಿ ಸೃಷ್ಠಿ ಸಿಂಗೆ, ಅರುಣ ಕೊಡೆಕಲ್, ಪರಮೇಶ್ವರ ರೊಟ್ಟಿ, ದರ್ಶನ ಚಿಮ್ಮಡ ಹಾಗೂ ಶಶಿಕಾಂತ ಮೂರ್ತಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಜಾನಪದ ನೃತ್ಯದಲ್ಲಿ ಪ್ರತಿಕ್ಷಾ ಕೊಲಕರ, ಸೌಮ್ಯ ಕೊಲಕರ್, ಸುಭಾಸ ಮೇಡೆಗಾರ್, ಗಜಾನಂದ ವಾಣಿ ಮತ್ತು ಶಂಕರಲಿಂಗ ಪಡಾಗನೂರ ಜಿಲ್ಲಾ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದು ಮತ್ತು ಜಾನಪದ ಗೀತೆಯಲ್ಲಿ ಪರಮೇಶ್ವರ ರೊಟ್ಟಿ, ಅಭಿಷೇಕ ಶೇಗುಣಸಿ, ಅಮಿತ ಜಮದಾಡೆ, ವಿಲಾಸ ಜಾಧವ ಹಾಗೂ ಅರವಿಂದ ವಜ್ಜಲ್ ಇವರು ಜಿಲ್ಲಾ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಸಾಧನೆಗೈದ ವಿದ್ಯಾರ್ಥಿಗಳಿಗೆ ಮಹಾವಿದ್ಯಾಲಯದ ಅಧ್ಯಕ್ಷ ಶ್ರೀಪಾದ ಜೋಶಿ, ಪ್ರಾಚಾರ್ಯ ಜಿ.ಜೆ. ಹತ್ತಳ್ಳಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.