ಸಫಾಯಿ ಕರ್ಮಚಾರಿಗಳ ದುರುಪಯೋಗ ಕಂಡು ಬಂದಲ್ಲಿ FIR ದಾಖಲಿಸಲು ಡಿಸಿ ಫೌಜಿಯಾ ತರನ್ನುಮ್ ಸೂಚನೆ

IMG-20250327-WA0020
Published on

ಕಲಬುರಗಿ : ಜಿಲ್ಲೆಯಲ್ಲಿ ಸ್ವಚ್ಚತೆ ಕಾರ್ಯಕ್ಕಾಗಿ ಸಫಾಯಿ ಕರ್ಮಚಾರಿಗಳ ದುರುಬಳಕೆ ಕಂಡುಬಂದಲ್ಲಿ ಸಂಬಂಧಿತ ಸಂಸ್ಥೆ ಹಾಗೂ ಅಧಿಕಾರಿಗಳ‌ ಮೇಲೆ FIR ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಫೌಜಿಯ ತರನ್ನುಮ್ ಅವರು ಎಚ್ಚರಿಕೆ ನೀಡಿದರು.

ಇಂದು ಅವರ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸಫಾಯಿ ಕರ್ಮಚಾರಿಗಳ ಕುರಿತು ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಮಾತನಾಡಿದ ಅವರು ಇತ್ತೀಚಿಗೆ ಜಿಲ್ಲೆಯಲ್ಲಿ ನೆಡೆದ ಖಾಸಗಿ ನೀರಿನ ಟ್ಯಾಂಕ್ ದುರ್ಘಟನೆ ಮರುಕಳಿಸದಂತೆ ಮುಂಜಾಗ್ರತೆ ಕ್ರಮ ಕೈಗೊಳ್ಳಿ ಎಂದು ಹೇಳಿದರು.

ಜಿಲ್ಲೆಯಲ್ಲಿ ಸಫಾಯಿ ಕರ್ಮಾಚಾರಿ ರಿಪೋರ್ಟ್ ಶೂನ್ಯವಿದ್ದರು ಸಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಿ.

45 ದಿನಗಳ ಒಳಗೆ ಮಳೆಗಾಲಕ್ಕೆ ಅವಶ್ಯವಿರುವ ಕಾರ್ಯಗಳಿಗೆ ಸಂಬಂಧಿತ ಕಾರ್ಯಗಳನ್ನು ಮುಗಿಸಿ.

ಪ್ರತಿ ಸಫಾಯಿ ಕರ್ಮಚಾರಿಗಳಿಗೆ ಐಡಿ ಕಾರ್ಡ್ ನೀಡುವುದು ಖಡ್ಡಾಯ, ಸೇಫ್ಟಿ ಇನ್ಸ್ಟ್ರುಮೆಂಟ್ಸ್ ಇರುವುದನ್ನು ಖಚಿತಪಡಿಸಿಕೊಳ್ಳಿ ಎಂದರು.

ಖಾಸಗಿಯಾಗಿ ಮುಖತಃ ಬೇಟಿ ಮಾಡಿ ಸಫಾಯಿ ಕರ್ಮಚಾರಿಗಳ ಮನ ಒಲಿಸಿ ಸ್ವಚ್ಚತೆ ಕಾರ್ಯಕ್ಕೆ ಅವಶ್ಯಕ ಸಾಮಾಗ್ರಿಗಳನ್ನು ಬಳಸಲು ಅರಿವು ಮೂಡಿಸಿ.

ಮಾಧ್ಯಮಗಳಲ್ಲಿ ಈ ಬಗ್ಗೆ ಹಲವು ಬಾರಿ ಸುದ್ದಿಗಳು ಬರುವುದನ್ನು ಗಮನಸಿದ್ದೇನೆ. ಇದು ಮುಂದುವರೆದಲ್ಲಿ ಸಂಬಂಧಿತರ ಮೇಲೆ‌ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು.

ಸಫಾಯಿ ಕರ್ಮಚಾರಿಗಳ ಆರೋಗ್ಯಕ್ಕೆ ಸಂಬಂಧಿಸಿದಂತೆ ಕೈಗೊಂಡ ಕ್ರಮಗಳು, ಕಲ್ಯಾಣ ಕಾರ್ಯಕ್ರಮಗಳ ಕುರಿತು ಮಂದಿನ ಬಾರಿ ಪ್ರತಿ ಸ್ಥಳೀಯ ಸಂಸ್ಥೆ ವರದಿ ಸಲ್ಲಿಸಬೇಕು ಸಾಕ್ಷಿಗಳೊಂದಿಗೆ ಹಾಗೂ ಅಗತ್ಯ ದಾಖಲೆಗಳಿರಬೇಕು.ಆರೋಗ್ಯ ವಿಮೆ ಬಗ್ಗೆ ಸಹ ಗಮನಹರಿಸಬೇಕು. ಬಾಕಿ ಇರುವ ಕಡೆ ಬೇಗ ಮಾಡಿಸಿ. ಸಂಬಳ ಬರುವ ಖಾತೆ ಬ್ಯಾಂಕ್ ಗಳಲ್ಲಿ ಚಾಲ್ತಿಯಲ್ಲಿರುವ ಆರೋಗ್ಯ ಮತ್ತು ಜೀವ ವಿಮೆಗಳನ್ನು ಮಾಡಿಸಲು ಕ್ರಮ ಕೈಗೊಳ್ಳಿ.

ಮನೆರಹಿತರಿಗೆ ಹಾಗೂ ನಿವೇಶನ ರಹಿತರಿಗೆ ತ್ವರಿತಗತಿಯಲ್ಲಿ ಸಮಸ್ಯೆ ಬಗೆಹರಿಸಿ ಅವರಿಗೆ ಸೂರು ಒದಗಿಸುವುದು ನಮ್ಮ ಕರ್ತವ್ಯ ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು, ಡಿಸಿಪಿ ಕನಿಕಾ ಸಿಕ್ರಿವಾಲ, ಸಮಾಜ ಕಲ್ಯಾಣ ಇಲಾಖೆ ಅಪರ ನಿರ್ದೇಶಕ ಅಲ್ಲಾಬಕ್ಷ್, ಡಿಯುಡಿಸಿ ಯೋಜನಾ ನಿರ್ದೇಶಕ ಮುನವರ್ ದೌಲ್ ಸೇರಿದಂತೆ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net