ಡಿ.ಕೆ. ರವಿ ಪತ್ನಿ ಕುಸುಮಾ ಚುನಾವಣೆ ಸ್ಪರ್ಧೆ ಕುರಿತು ಸ್ಫೋಟಕ ಹೇಳಿಕೆ ನೀಡಿದ ತಂದೆ ಹನುಮಂತರಾಯಪ್ಪ

Kusuma
Published on

ಬೆಂಗಳೂರು: ಬಿಜೆಪಿ ಟಿಕೆಟ್​ ಆಕಾಂಕ್ಷಿ ಮುನಿರತ್ನರನ್ನು ಸೋಲಿಸುವುದೇ ನನ್ನ ಗುರಿ ಎಂದು ರಾಜರಾಜೇಶ್ವರಿ ನಗರ ಕ್ಷೇತ್ರದ ಜೆಡಿಎಸ್​ ಮುಖಂಡ ಹಾಗೂ ದಿವಂಗತ ಡಿ.ಕೆ. ರವಿ ಅವರ ಮಾವ ಹನುಮಂತರಾಯಪ್ಪ ತಿಳಿಸಿದರು.

ಗುರುವಾರ ದಿಗ್ವಿಜಯ ನ್ಯೂಸ್​ನೊಂದಿಗೆ ಮಾತನಾಡಿದ ಅವರು ಮುನಿರತ್ನರನ್ನು ಸೋಲಿಸುವುದು ನನ್ನ‌ ಗುರಿಯಾಗಿದೆ. ಹೀಗಾಗಿ ಕಾಂಗ್ರೆಸ್​ ಮತ್ತು ಜೆಡಿಎಸ್ ಒಮ್ಮತದ ಅಭ್ಯರ್ಥಿ ಹಾಕಬೇಕೆಂದು ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ಮುಖಂಡರಿಗೆ ಹೇಳಿದ್ದೇನೆಂದರು.

ನಾನು ಜೆಡಿಎಸ್​ನಲ್ಲಿದ್ದೇನೆ. ಆದರೆ, ಸ್ಪರ್ಧೆ ಮಾಡುವಂತೆ ಕಾಂಗ್ರೆಸ್​ನಿಂದ ಆಹ್ವಾನ ಬಂದಿದೆ. ಆದರೆ ಸ್ಪರ್ಧೆ ಮಾಡುವುದಿಲ್ಲ. ಮಗಳು ಕುಸುಮಾ ಸ್ಪರ್ಧೆ ಬಗ್ಗೆ ಮನೆಯಲ್ಲಿ ಚರ್ಚೆ ನಡೆದಿದೆ. ಈ ಬಗ್ಗೆ ಆಹ್ವಾನ ಬಂದಿದೆ. ಆದರೆ ನನ್ನ ಮಗಳು ತಿರ್ಮಾನ ಕೈಗೊಳ್ಳಬೇಕಿದೆ. ಅಸಿಸ್ಟೆಂಟ್ ‌ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದಾಳೆ. ಮಗಳ ಮುಂದಿನ ಭವಿಷ್ಯ ಮುಖ್ಯವಾಗಿದ್ದು, ಸ್ಪರ್ಧೆಗೆ ಒಪ್ಪಿದರೆ ನಾನು ಬೆಂಬಲ ನೀಡುತ್ತೇನೆಂದು ತಿಳಿಸಿದರು.

ಇದಕ್ಕೂ ಮುನ್ನ ಹನುಮಂತರಾಯಪ್ಪ ತಮ್ಮ ಮಗಳು ಕುಸುಮಾ ಜತೆ ವಿಜಯನಗರದಲ್ಲಿರುವ ಆದಿ ಚುಂಚನಗಿರಿ ಶಾಖಾ ಮಠಕ್ಕೆ ಭೇಟಿ ನೀಡಿದರು. ತಂದೆ ಮತ್ತು ಮಗಳು ನಿರ್ಮಲಾನಂದ ಶ್ರೀಗಳ ಆಶೀರ್ವಾದ ಪಡೆದುಕೊಂಡರು. ಭೇಟಿಯ ವಿಚಾರವೀಗ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಯಾಗುತ್ತಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net