ರಸ್ತೆ ಅಪಘಾತ, ಸ್ಥಳದಲ್ಲೇ ಇಬ್ಬರ ಸಾವು, ಹೆದ್ದಾರಿ ತಡೆದು ಸಾರ್ವಜನಿಕರ ಆಕ್ರೋಶ

Road Accident, Death, Highway Blockage, Basavanbagewadi, Managuli, National Highway,
ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದ ಹೊರ ವಲಯದಲ್ಲಿರುವ ಚಿತ್ರದುರ್ಗ- ವಿಜಯಪುರ ರಾಷ್ಟ್ರೀಯ ಹೆದ್ದಾರಿ ತಡೆದು ಸಾರ್ವಜನಿಕರು ಪ್ರತಿಭಟನೆ ಮಾಡುತ್ತಿರುವುದು.
Published on

ಬಸವನಬಾಗೇವಾಡಿ: ಬಸವನಬಾಗೇವಾಡಿ: ತಾಲೂಕಿನ ಮನಗೂಳಿ ಪಟ್ಟಣದ ಹೊರವಲಯದಲ್ಲಿರುವ ವಿಜಯಪುರ-ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ (50) ರಲ್ಲಿ ಬೈಕ್ ಸವಾರರಿಗೆ ಲಾರಿ ಡಿಕ್ಕಿಯಾಗಿ ಸ್ಥಳದಲ್ಲಿಯೇ ಮನಗೂಳಿ ಪಟ್ಟಣದ ಇಬ್ಬರು ಶುಕ್ರವಾರ ನಿವಾಸಿಗಳು ಸಾವಿಗೀಡಾಗಿದ್ದಾರೆ.

ಖಂಡುಭಾ ತಂದೆ ಮಾತಾರ್ಂಡ ಘೋರ್ಪಡೆ (55) ಹಾಗೂ ಭೀಮಪ್ಪ ತಂದೆ ಯಲಗುರದಪ್ಪ ಹಿಟ್ನಳ್ಳಿ (48) ಮೃತರು.

ಘಟನೆ ವಿವರ: ಆಲಮಟ್ಟಿ ಕಡೆಯಿಂದ ವಿಜಯಪುರ ಕಡೆಗೆ ಅತಿ ವೇಗವಾಗಿ ಬರುತ್ತಿದ್ದ ಲಾರಿ ಮನಗೂಳಿ ಪಟ್ಟಣದಿಂದ ಮೋಟಾರ್ ಬೈಕ್ ಮೇಲೆ ಮುಳವಾಡ ಕ್ರಾಸ್‌ನಲ್ಲಿ ರಸ್ತೆ ದಾಟುತ್ತಿರುವಾಗ ಅಪಘಾತ ಸಂಭವಿಸಿದೆ. ಲಾರಿ ಚಾಲಕ ಸ್ಥಳದಲ್ಲೇ ಲಾರಿ ಬಿಟ್ಟು ಪರಾರಿಯಾಗಿದ್ದು, ಈ ಕುರಿತು ತಾಲೂಕಿನ ಮನಗೂಳಿ ಪೊಲೀಸ್ ಠಾಣೆಯಲ್ಲಿ ಮೃತ ಖಂಡುಬಾ ಘೋರ್ಪಡೆ ಪುತ್ರ ಪ್ರಶಾಂತ ಘೋರ್ಪಡೆ ದೂರು ದಾಖಲಿಸಿದ್ದಾರೆ.

ಸಾರ್ವಜನಿಕರಿಂದ ಹೆದ್ದಾರಿ ತಡೆ: ವಿಷಯ ತಿಳಿದ ತಕ್ಷಣ ಮನಗೂಳಿ ಪಟ್ಟಣದ ಸಾರ್ವಜನಿಕರು ಕೆಲ ಹೊತ್ತು ರಾಷ್ಟ್ರೀಯ ಹೆದ್ದಾರಿ ತಡೆದು ಆಕ್ರೋಶ ವ್ಯಕ್ತಪಡಿಸಿದರು. ಮನಗೂಳಿ ಪಟ್ಟಣದ ಜನತೆಯ ಹಲವಾರು ಜಮೀನುಗಳು ರಾಷ್ಟ್ರೀಯ ಹೆದ್ದಾರಿ ಅಕ್ಕ ಪಕ್ಕದಲ್ಲಿ ಇದ್ದು ಜಮೀನುಗಳಿಗೆ ಹೋಗುವಾಗ ಇಂತಹ ಘಟನೆಗಳು ಪದೇ ಪದೆ ನಡೆಯುತ್ತಿವೆ. ಸಂಬಂಧಪಟ್ಟವರು ನಮ್ಮ ಜಮೀನಿಗೆ ಹೋಗಿ ಬರಲು ಮೇಲ್ಸೇತುವೆ ರಸ್ತೆ ಮಾಡಿಕೊಡಬೇಕು. ಮೃತ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಪೊಲೀಸ್ ಅಧಿಕಾರಿಗಳು ಪ್ರತಿಭಟನಾಕಾರರ ಮನವೊಲಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಪ್ರತಿಭಟನಾಕಾರರು ತಹಸೀಲ್ದಾರ್ ಯಮನಪ್ಪ ಸೋಮನಕಟ್ಟಿ ಅವರಿಗೆ ಮನವಿ ಸಲ್ಲಿಸಿದರು.

ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ, ಜಿಲ್ಲಾ ಉಪ ಪೊಲೀಸ್ ವರಿಷ್ಠಾಧಿಕಾರಿ ಎಸ್.ಕೆ. ಮಾರಿಹಾಳ, ವಿಜಯಪುರ ಗ್ರಾಮೀಣ ಡಿವೈಎಸ್ಪಿ ಜಿ.ಎಚ್.ತಳಕಟ್ಟಿ, ಬಸವನಬಾಗೇವಾಡಿ ತಹಸೀಲ್ದಾರ್ ಯಮನಪ್ಪ ಸೋಮನಕಟ್ಟಿ, ಮನಗೂಳಿ ಪಿ.ಎಸ್.ಐ. ಶ್ರೀಕಾಂತ ಕಾಂಬಳೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net