

ಮಂಗಳೂರು: ಬ್ರಹ್ಮಶ್ರೀ ನಾರಾಯಣಗುರುಗಳ ಸಂಕ್ಷಿಪ್ತ ಚರಿತ್ರೆಯ ಕೈಪಿಡಿ 'ಗುರು ಜ್ಞಾನವಾಣಿ'ಯನ್ನು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಗುರುವಾರ ಶ್ರೀ ವಿಖ್ಯಾತನಂದ ಸ್ವಾಮೀಜಿ ಬಿಡುಗಡೆಗೊಳಿಸಿದರು.
ಕ್ಷೇತ್ರದ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಕ್ಷೇತ್ರಾಡಳಿತ ಸಮಿತಿ ಕಾರ್ಯದರ್ಶಿ ಮಾಧವ ಸುವರ್ಣ, ಕೋಶಾಧಿಕಾರಿ ಪದ್ಮರಾಜ್ ಆರ್., ಸಾಹಿತಿ ಮುದ್ದು ಮೂಡುಬೆಳ್ಳೆ, ವಿದ್ವಾಂಸ ಕೆ.ಪುರುಷೋತ್ತಮ, ಶಂಕರ್ ಸುವರ್ಣ ಮುಂಬೈ, ಗುರುರಾಜ್ ಮೂಲ್ಕಿ, ಗುರು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಜಯಾನಂದ ಪೂಜಾರಿ, ಹಿರಣ್ಯ ಪೂಜಾರಿ ಮಸ್ಕತ್, ಸಾಧು ಪೂಜಾರಿ, ರಾಜೇಂದ್ರ ಚಿಲಿಂಬಿ, ಕ್ಷೇತ್ರದ ಮ್ಯಾನೇಜರ್ ವಿನೀತ್ ಕುಮಾರ್, ರಾಮಚಂದ್ರ ಸಾಲ್ಯಾನ್, ರಾಮಚಂದ್ರ ಪೂಜಾರಿ, ಪ್ರಿಂಟರ್ ದಿನಕರ್, ಜನಾರ್ದನ್ ಮೊದಲಾದವರಿದ್ದರು.