ಅಕ್ಕಿ ಲಾರಿ ಕಳ್ಳರೊಂದಿಗೆ ರಾತ್ರಿ ಡೀಲ್: ಆಳಂದ ಸಿಪಿಐ ಸೇರಿ ನಾಲ್ವರು ಪೊಲೀಸ್ ಅಮಾನತು

ಅಕ್ರಮ ಅಕ್ಕಿ ಸಾಗಣೆ ಲಾರಿಯನ್ನು ಮಹಾರಾಷ್ಟ್ರಕ್ಕೆ ಬಿಟ್ಟು ಕಳುಹಿಸಿದ್ದ ಪೊಲೀಸರು
ಆಳಂದ ಪೊಲೀಸರ ಅಕ್ಕಿ ಕಳ್ಳಾಟ ಬಯಲು
ಆಳಂದ ಪೊಲೀಸರ ಅಕ್ಕಿ ಕಳ್ಳಾಟ ಬಯಲು
Published on: 

ಕಲಬುರಗಿ: ಆಳಂದ ಪೊಲೀಸ್ ಠಾಣೆಯಿಂದ ಅಕ್ಕಿ ಲಾರಿ ಬಿಟ್ಟು ಕಳುಹಿಸಿದ ಪ್ರಕರಣದಲ್ಲಿ ಸಿಪಿಐ ಸೇರಿದಂತೆ ನಾಲ್ವರು ಪೊಲೀಸರನ್ನು ಅಮಾನತು ಮಾಡಲಾಗಿದೆ.

ರಾತ್ರೋ ರಾತ್ರಿ ಅಕ್ಕಿ ಕಳ್ಳತನದ ಲಾರೀಯನ್ನು ಹಿಡಿದು, ಠಾಣೆಯಿಂದಲೇ ಡೀಲ್ ಮಾಡಿ ಹಣ ಪಡೆದು ಪುನಃ ಬಿಟ್ಟು ಕಳುಹಿಸಿದ್ದು, ಮಹಾರಾಷ್ಟ್ರದ ಅಕ್ಕಲಕೋಟಕ್ಕೆ ಗೂಡ್ಸ್ ವಾಹನ ಹೋಗಿತ್ತು. ಸುದ್ದಿ ಹರಡುತ್ತಲೇ ಪುನಃ ಅಕ್ಕಿ ವಾಹನವನ್ನು ಅಕ್ಕಲಕೋಟದಿಂದ ವಾಪಸ್ ಠಾಣೆಗೆ ಕರೆತಂದು ಕೇಸ್ ದಾಖಲಿಸಲಾಗಿತ್ತು.

ಈ ಕುರಿತು ವಿಜಯವಾಣಿ ವಿಸ್ತೃತ ವರದಿ ಪ್ರಕಟಿಸಿತ್ತು. ಈ ಕುರಿತು ಇಲಾಖೆ ತನಿಖೆ ನಡೆಸಿದ ಪೊಲೀಸರು ಆಳಂದ ಸಿಪಿಐ ಶರಣಬಸ್ಸಪ್ಪಾ , ಕಾನಸ್ಟೇಬಲ್ ಗಳಾದ ಹಣಮಂತ್, ಮಲ್ಲಿಕಾರ್ಜುನ ಹಾಗು SHO ಸಾಯಬಣ್ಣನನ್ನು ಅಮಾನತು ಮಾಡಲಾಗಿದೆ.

ಅಮಾನತ್ತು ಮಾಡಿ ಈಶಾನ್ಯ ವಲಯ ಐಜಿಪಿ ಶಾಂತನು ಸಿನ್ನಾ ಆದೇಶ ಹೊರಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net