ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯ ಸ್ಥಳಾಂತರಿಸಿ

02kTR1_WEB
ಚೆನ್ನಮ್ಮ ವಿವಿ ಸ್ಥಳಾಂತರಕ್ಕೆ ಆಗ್ರಹಿಸಿ ಕಿತ್ತೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಿ, ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು. ಬಂಗಾರೇಶ ಹಿರೇಮಠ, ಅರುಣಕುಮಾರ ಬಿಕ್ಕಣ್ಣವರ ಇತರರು ಇದ್ದರು.
Published on

ಚನ್ನಮ್ಮ ಕಿತ್ತೂರು: ಕಿತ್ತೂರಿಗೆ ಆರ್‌ಸಿಯು ಸ್ಥಳಾಂತರಿಸಲು ಆಗ್ರಹಿಸಿ ಕಿತ್ತೂರು ಬ್ಲಾಕ್ ಕಾಂಗ್ರೆಸ್‌ನಿಂದ ಇತ್ತೀಚೆಗೆ ಪ್ರತಿಭಟಿಸಿ, ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.

ಆರ್‌ಸಿಯು ಕಿತ್ತೂರಿಗೆ ಸ್ಥಳಾಂತರ ಮಾಡದೇ, ಬಾಗೇವಾಡಿಗೆ ಸ್ಥಳಾಂತರಿಸಲು ಮುಂದಾಗಿರುವ ಸರ್ಕಾರದ ಕ್ರಮ ಸರಿಯಲ್ಲ.

ಜನಪ್ರತಿನಿಧಿಗಳು ಕಿತ್ತೂರಿಗೆ ವಿವಿ ಸ್ಥಳಾಂತರ ಮಾಡಲು ಮುಂದಾಗಬೇಕು ಎಂದು ಆಗ್ರಹಿಸಿದರು. ರೈತರನ್ನು ಹತ್ತಿಕ್ಕುವ ಮಸೂದೆ ಜಾರಿಗೊಳಿಸುತ್ತಿರುವ ಉಭಯ ಸರ್ಕಾರಗಳ ಕ್ರಮ ಸರಿಯಲ್ಲ. ಉತ್ತರ ಪ್ರದೇಶದ ದಲಿತ ಯುವತಿ ಮೇಲೆ ನಡೆದ ಅತ್ಯಾಚಾರ ಘಟನೆ ಇಡೀ ಸಮಾಜ ತಲೆ ತಗ್ಗಿಸುವಂತಾಗಿದೆ. ಉತ್ತರ ಪ್ರದೇಶ ಸರ್ಕಾರ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.

ಕೆಪಿಸಿಸಿ ವೀಕ್ಷಕ ಬಂಗಾರೇಶ ಹಿರೇಮಠ, ಕಿತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರುಣಕುಮಾರ ಬಿಕ್ಕಣ್ಣವರ, ಜಿಪಂ ಸದಸ್ಯೆ ರಾಧಾ ಕಾದ್ರೊಳ್ಳಿ, ಮಹಾದೇವ ಹಿತ್ತಲಮನಿ, ಬಸವರಾಜ ಹೋಳಿ, ಸಂಜೀವ ಲೋಕಾಪುರ, ಹನೀಫ್ ಸುತಗಟ್ಟಿ, ಪುಂಡಲೀಕ ನಿರಲಕಟ್ಟಿ, ಜಗದೀಶ ಘಟ್ನಟ್ಟಿ, ಬಾಬು ವಳಸಂಗ, ಮಹೇಶ, ಕಾಶೀಂ ನೇಸರಗಿ, ಮಡಿವಾಳಪ್ಪ ಕೊಟಗಿ, ಫಕೀರಪ್ಪ ಜಾಂಗಟಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net