ಬ್ರಹ್ಮಾವರದಲ್ಲಿ ಮಳೆಗಾಲ ಪೂರ್ವಸಿದ್ಧತೆ ಚುರುಕು

road-1
ರಾಷ್ಟ್ರೀಯ ಹೆದ್ದಾರಿ 66 ಮಳೆಗಾಲದಲ್ಲಿ ರಸ್ತೆಯಲ್ಲಿ ಸ್ವಚ್ಛತಾ ಕಾರ್ಯ ನಡೆಸುತ್ತಿರುವುದು
Published on

ಬ್ರಹ್ಮಾವರ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮಳೆಗಾಲ ಸಂದರ್ಭ ರಸ್ತೆಯಲ್ಲಿ ನೀರು ಸರಿಯಾಗಿ ಹರಿದು ಹೋಗದೆ ರಸ್ತೆಯಲ್ಲಿ ತುಂಬಿ ಹರಿಯುವ ಸಮಸ್ಯೆಗೆ ಬ್ರಹ್ಮಾವರ ಭಾಗದಲ್ಲಿ ಈಗಾಗಲೇ ಪೂರ್ವಸಿದ್ಧತೆ ಕಾರ್ಯ ಚುರುಕಿನಿಂದ ನಡೆಯುತ್ತಿದೆ.

ಪ್ರತಿ ವರ್ಷ ರಸ್ತೆಯಲ್ಲಿ ನೀರು ನಿಂತು ಪ್ರಯಾಣಿಕರಿಗೆ ಮತ್ತು ವಾಹನ ಸವಾರರರಿಗೆ ಸಮಸ್ಯೆಯಾಗುತ್ತಿತ್ತು. ಹಿಂದೆ ಇದ್ದ ನವಯುಗ ಕಂಪನಿಯಿಂದ ಎಚ್‌ಸಿ ನಂಬರ್ ಒನ್ ಸಂಸ್ಥೆಗೆ ಬಂದ ಬಳಿಕ ಈ ವರ್ಷ ಹೆದ್ದಾರಿ ಸ್ವಚ್ಛತಾ ನಿರ್ವಹಣೆ ಕಾರ್ಯ ಮಾಡುತ್ತಿದೆ.

ಸಾಸ್ತಾನ ಟೋಲ್ ಗೇಟ್‌ಗೆ ಸಂಬಂಧಿಸಿ ಉದ್ಯಾವರದಿಂದ ಕುಂದಾಪುರ ತನಕ ಸ್ವಚ್ಛತಾ ನಿರ್ವಹಣೆ ಹೊಣೆಹೊತ್ತವರು ಕಳೆದ ಕೆಲವು ದಿನದಿಂದ ರಸ್ತೆ ಬದಿ ಇರುವ ಕಸ ಕಡ್ಡಿ, ಗಿಡಗಂಟಿಗಳನ್ನು ಕಟಾವು ಮಾಡಿ ರಸ್ತೆ ನಡುವೆ ಇರುವ ಹೂವಿನಗಿಡಕ್ಕೆ ನೀರು ಹಾಯಿಸಿ, ರಸ್ತೆ ಬದಿ ಮಣ್ಣು ಮರಳನ್ನು, ಸ್ವಚ್ಛಗೊಳಿಸಿ ಅಲ್ಲಲ್ಲಿ ಬಿದ್ದ ರಾಶಿ ರಾಶಿ ಖಾಲಿ ಬಾಟಲಿಗಳನ್ನು ತೆರವುಗೊಳಿಸಿದ್ದಾರೆ.

ಒಂದೆಡೆ ಸ್ವಚ್ಛತಾ ನಡೆಯುತ್ತಿದ್ದು, ಮತ್ತೊಂದೆಡೆ ರಸ್ತೆ ನಡುವೆ ಇರುವ ದೀಪಗಳನ್ನು ಬದಲಿಸಿ ಬದಲಿ ಬೆಳಕಿನ ವ್ಯವಸ್ಥೆಗೆ ಕಾಮಗಾರಿ ನಡೆಯುತ್ತಿದ್ದು, ಹೊಸ ಗುತ್ತಿಗೆದಾರರು ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿಯಲು ಕಾಮಗಾರಿ ನಡೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net