ಯುವತಿ ಸಾವಿಗೆ ಕಾರಣರಾದವರ ಬಂಧಿಸಿ

ಹಟ್ಟಿ ಪೊಲೀಸ್ ಠಾಣೆ ಆವರಣದಲ್ಲಿ ಮಹಾಶಕ್ತಿ ಮಹಿಳಾ ಸಬಲೀಕರಣ ಸಂಘಟನೆ ಸೇರಿ ವಿವಿಧ ಸಂಘಟನೆಗಳು ಶುಕ್ರವಾರ ಪ್ರತಿಭಟನೆ ನಡೆಸಿದವು.
ಹಟ್ಟಿ ಪೊಲೀಸ್ ಠಾಣೆ ಆವರಣದಲ್ಲಿ ಮಹಾಶಕ್ತಿ ಮಹಿಳಾ ಸಬಲೀಕರಣ ಸಂಘಟನೆ ಸೇರಿ ವಿವಿಧ ಸಂಘಟನೆಗಳು ಶುಕ್ರವಾರ ಪ್ರತಿಭಟನೆ ನಡೆಸಿದವು.
Published on
ಯುವತಿ ಸಾವಿಗೆ ಕಾರಣರಾದವರ ಬಂಧಿಸಿ Those responsible for the death of a young woman have been arrested
ಹಟ್ಟಿಚಿನ್ನದಗಣಿ: ಕಳೆದ ತಿಂಗಳು ಪಟ್ಟಣದ ಹೊರವಲಯದಲ್ಲಿ ಯುವತಿ ಅನುಮಾನಾಸ್ಪದ ಸಾವಿನ ಪ್ರಕರಣದ ಆರೋಪಿಗಳ ಬಂಧನ ವಿಳಂಬ ಖಂಡಿಸಿ ಶುಕ್ರವಾರ ಮಹಾಶಕ್ತಿ ಮಹಿಳಾ ಸಬಲೀಕರಣ ಸಂಘಟನೆ ಸೇರಿ ವಿವಿಧ ಸಂಘಟನೆಗಳು ಸ್ಥಳೀಯ ಪೊಲೀಸ್ ಠಾಣೆ ಆವರಣದಲ್ಲಿ ಪ್ರತಿಭಟನೆ ನಡೆಸಿದವು. 
ಮಹಿಳಾ ಸಬಲೀಕರಣ ಸಂಘಟನೆಯ ರಾಜ್ಯಾಧ್ಯಕ್ಷೆ ವಿಜಯರಾಣಿ ಮಾತನಾಡಿ, ಒಂದು ತಿಂಗಳಾದರೂ ಯುವತಿ ಜ್ಯೋತಿ ಸಾವಿಗೆ ಕಾರಣರಾದ ಪ್ರಿಯಕರ ಜ್ಞಾನಮೂರ್ತಿ ಹಾಗೂ ಆತನ ಕುಟುಂಬದವರನ್ನು ಈವರೆಗೆ ಪೊಲೀಸರು ಬಂಧಿಸದೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಈ ಮೂಲಕ ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಗಳಿಗೆ ಪ್ರೋತ್ಸಾಹ ನೀಡಿದಂತಾಗಿದೆ ಎಂದು ಆರೋಪಿಸಿದರು. 
ಮನವಿ ಸ್ವಿಕರಿಸಿದ ಡಿವೈಎಸ್ಪಿ ದತ್ತಾತ್ರೇಯ ಕರ್ನಾಡ್ ಮಾತನಾಡಿ, ಆರೋಪಿಗಳ ರಕ್ಷಿಸುವ ಮಾತೇ ಇಲ್ಲ. ಈಗಾಗಲೇ ಪ್ರಿಯಕರ ಜ್ಞಾನಮೂರ್ತಿಯನ್ನು ಬಂಧಿಸಿದ್ದು, ಉಳಿದವರ ಪತ್ತೆಗೆ ತಂಡ ರಚಿಸಿ ಬಂಧಿಸಲಾಗುವುದು ಎಂದು ಭರವಸೆ ನೀಡಿದರು. ಹೀಗಾಗಿ ನಂತರ ಪ್ರತಿಭಟನೆ ಹಿಂಪಡೆಯಲಾಯಿತು. 
ಪ್ರಮುಖರಾದ ಜಮದಗ್ನಿ, ಕುಪ್ಪಣ್ಣ, ಮೋಹನ್ ಬೋಸ್ಲೆ, ನರಸಿಂಹಲು ನೆಲಹಾಳ, ಜಾವೀದ್ ಖಾನ್, ಮಾರುತಿ ಚಿಕ್ಕಹೆಸರೂರು, ಚನ್ನಮ್ಮ ಮುದ್ದಂಗುಡ್ಡಿ, ವಿರುಪಮ್ಮ, ಶಾಂಭವಿ, ಅಕ್ಕಮ್ಮ, ಸುಮಲತಾ, ಈರಮ್ಮ, ಪಾರ್ವತಿ, ಯಲ್ಲಮ್ಮ, ತಿಪ್ಪಮ್ಮ, ಮರಿಯಮ್ಮ, ಮೇರಿಪುಷ್ಪ, ಸಂತೋಷಮ್ಮ, ಅಮೃತಮ್ಮ, ಅಂಚಲಮ್ಮ, ದೇವಮ್ಮ, ಜಯ್ಯಮ್ಮ, ಗೌರಮ್ಮ, ಹುಲಿಗೆಮ್ಮ, ಗುರುರಾಜ, ಖಾಜಾಸಾಬ್, ಹನುಮೇಶ, ಗುಂಡಪ್ಪ ಇತರರಿದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net