ಯುದ್ದದ ಎಫೆಕ್ಟ್ ಟೊಮ್ಯಾಟೊ ಬೆಳೆದ ರೈತ ಕಂಗಾಲು

ರಾಯಚೂರು ತಾಲೂಕಿನ ರಾಳದೊಡ್ಡಿ ಗ್ರಾಮದಲ್ಲಿ ಟೊಮ್ಯಾಟೊ ಬೆಳೆಯನ್ನು ನಾಶ ಮಾಡಿರುವುದು.
ರಾಯಚೂರು ತಾಲೂಕಿನ ರಾಳದೊಡ್ಡಿ ಗ್ರಾಮದಲ್ಲಿ ಟೊಮ್ಯಾಟೊ ಬೆಳೆಯನ್ನು ನಾಶ ಮಾಡಿರುವುದು.
Published on
ರಾಯಚೂರು ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧ ಅಡುಗೆ ಅನಿಲ್ ಸಿಲಿಂಡರ್ ಅಭಾವ ಒಂದು ಕಡೆಯಾದರೆ ಜಿಲ್ಲೆಯಲ್ಲಿ ರೈತರು ಬೆಳೆದ ಟೊಮ್ಯಾಟೊ ಬೆಳೆಗೆ ಖರೀದಿದಾರರು ಇಲ್ಲದೆ ಕಂಗಾಲಾಗಿದ್ದಾರೆ.
ಮುಂಬೈ ಮೂಲದ ದಲ್ಲಾಳಿಗಳು ರೈತರಿಂದ ಖರೀದಿಸುವ ಟೊಮ್ಯಾಟೊ ಬೇರೆ ದೇಶಗಳಿಗೆ ರಫ್ತಾಗುತ್ತಿತ್ತು. ಯುದ್ದ ಆರಂಭವಾದಾಗಿನಿಂದ ಮುಂಬೈ ಖರಿದಿದಾರರು ಟೊಮ್ಯಾಟೊ ಖರೀದಿಗೆ ಬರುತ್ತಿಲ್ಲ. ಖರೀದಿದಾರರು ಬಾರದ ಹಿನ್ನಲೆ ರೈತರು ಟೊಮ್ಯಾಟೊ ಬೆಳೆಯನ್ನು ಜಮೀನಿನಲ್ಲೆ ಕೊಳೆಯಲು ಬಿಟ್ಟಿದ್ದಾರೆ. ತರಕಾರಿ ಮಾರುಕಟ್ಟೆಯಲ್ಲಿ 10 ರೂಪಾಯಿಗೆ ಕೆ.ಜಿ ಟೊಮ್ಯಾಟೊ ಮಾರಾಟವಾಗುತ್ತಿದೆ.
ತಾಲೂಕಿನಲ್ಲಿ ಹೆಚ್ಚಾಗಿ ತರಕಾರಿ ಬೆಳೆಗಳನ್ನು ಬೆಳೆಯಲಾಗುತ್ತದೆ. ಆದರೆ ಫಸಲು ಕೈಗೆ ಬಂದು ಮಾರುಕಟ್ಟೆಗೆ ಹೋಗುವಷ್ಟರಲ್ಲಿ ಮಧ್ಯಪ್ರಾಚ್ಯ ದೇಶಗಳಲ್ಲಿ ಯುದ್ದ ಪ್ರಾರಂಭವಾಗಿದ್ದರಿಂದ ದರ ಕುಸಿತ ಒಂದು ಕಡೆಯಾದರೆ ಬೆಳೆದ ಬೆಳೆಗಳು ಅನ್ಯ ದೇಶಕ್ಕೆ ರಫ್ತಾ ನಿಲ್ಲಿಸಲಾಗಿದೆ.
ರೈತರು ಮುಂಬೈ ಮೂಲದ ದಲ್ಲಾಳಿಗಳಿಗೆ ಕರೆ ಮಾಡಿ ಕೇಳಿದರೆ ಸದ್ಯ ಯಾವುದೇ ತರಕಾರಿಗಳು ರಫ್ತು ಅಗುತ್ತಿಲ್ಲ. ಎನ್ನುವ ಉತ್ತರ ಬರುತ್ತಿದೆ. ಹೀಗಾಗಿ ರೈತರು ಬೆಳೆದ ಟೊಮ್ಯಾಟೊ ಕೊಳ್ಳುವವರಿಲ್ಲದೆ ಲಕ್ಷಾಂತರ ರೂ.ನಷ್ಟವಾಗುತ್ತಿದೆ.
ತಾಲೂಕಿನ ಸಗಮಕುಂಟ, ಉಪ್ರಾಳದೊಡ್ಡಿ, ಚಂದ್ರಬಂಡಾ, ಅಪ್ಪನದೊಡ್ಡಿ ಸೇರಿ ಹಲವು ಗ್ರಾಮಗಳಲ್ಲಿ ಹೆಚ್ಚಾಗಿ ಟೊಮ್ಯಾಟೊ ಬೆಳೆದಿದ್ದು, ಖರೀದಿದಾರರು ಇಲ್ಲದೆ ಹಾಳಾಗುತ್ತಿದೆ. ಎಕರೆಗೆ 20 ರಿಂದ 50 ಸಾವಿರ ಖರ್ಚು ಮಾಡಿ ಬೆಳೆದ ರೈತರಿಗೆ ಲಕ್ಷಾಂತರ ರೂ ನಷ್ಟ ಅನುಭವಿಸುತ್ತಿದ್ದಾರೆ.
ಎಕರೆಗೆ 1 ರಿಂದ 2 ಟನ್‌ಬೆಳೆಯುತ್ತಿದ್ದ ರೈತರು ಬೆಳೆಯನ್ನು ಜಾನುವಾರು ಹಾಗೂ ಭೂಮಿ ತಾಯಿಗೆ ಬಿಟ್ಟಿದ್ದಾರೆ. ರೈತರಿಂದ ಅತ್ಯಂತ ಕಡಿಮೆ ಬೆಲೆಗೆ ಸ್ಥಳೀಯ ಖರೀದಿದಾರರು ಕೊಳ್ಳುತ್ತಿದ್ದಾರೆ. ಇದರಿಂದ ರೈತರು ಕಂಗಾಲಾಗಿದ್ದಾರೆ. ಸರ್ಕಾರ ಸ್ಥಳೀಯವಾಗಿ ರೈತರಿಂದ ಟೊಮ್ಯಾಟೊ ಖರೀದಿಸಿ ಸಂಕಷ್ಟಕ್ಕೆ ಸ್ಪಂದಿಸಬೇಕೆಂದು ಒತ್ತಾಯಿಸಿಸಿದ್ದಾರೆ.
ರಾಯಚೂರು ತಾಲೂಕಿನಲ್ಲಿ ಹೆಚ್ಚಿನ ಪ್ರಾಮಾಣದಲ್ಲಿ ಟೊಮ್ಯಾಟೊ ಬೆಳೆಯನ್ನು ಬೆಳೆಯಲಾಗಿದೆ. ಆದರೆ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದರಿಂದ ಅನ್ಯ ದೇಶಕ್ಕೆ ರಫ್ತು ಅಗದಿರುವುದರಿಂದ ಮುಂಬೈ ಮೂಲದ ದಲ್ಲಾಳಿಗಳು ಖರೀದಿ ಮಾಡದಿರುವುದರಿಂದ ಬೆಳೆದ ಬೆಳೆಯನ್ನು ಭೂ ತಾಯಿಗೆ ನೀಡಿದ್ದೇವೆ.
ಹುಲಿಗೇಪ್ಪ ರೈತ ಉಡಮಗಲ್
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net