_1787928713518.webp?w=480&auto=format%2Ccompress&fit=max)
_1787928713518.webp?w=480&auto=format%2Ccompress&fit=max)
ರಾಯಚೂರು
ಪರಿಷ್ಕೃತ ಕನಿಷ್ಟ ವೇತನ ಕಾಯ್ದೆ ಜಾರಿಗೆ ಒತ್ತಾಯಿಸಿ ಸೆ.02 ರಂದು ಬೆಂಗಳೂರಿನ ಫ್ರಿಡ್‌ಂ ಪಾರ್ಕ್‌ನಲ್ಲಿ ರಾಜ್ಯ ಮಟ್ಟದ ಅಹೋರಾತ್ರಿ ಧರಣಿ ನಡೆಸಲು ನಿರ್ಧರಿಸಲಾಗಿದೆಂದು ಎಐಯುಟಿಯುಸಿ ರಾಜ್ಯ ಉಪಾಧ್ಯಕ್ಷ ಎನ್.ಎಸ್.ವೀರೇಶ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಪರಿಷ್ಕೃತ ಕನಿಷ್ಟ ವೇತನ ಕಾಯ್ದೆ ಜಾರಿಗೊಳಸಿದ್ದ ಸರ್ಕಾರ ಏಕಾಎಕಿ ತಡೆ ಹಿಡಿದಿರುವ ಕಾರ್ಮಿಕರಿಗೆ ಮಾಡಿದ ದ್ರೋಹವಾಗಿದೆ. ಕಾರ್ಮಿಕ ಪ್ರತಿನಿಧಿಗಳು, ಉದ್ಯಮದ ಪ್ರತಿನಿಧಿಗಳು, ಕಾರ್ಮಿಕ, ಆರ್ಥಿಕ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಗಳ ಪ್ರತಿನಿಧಿಗಳ ಒಳಗೊಂಡ ಕನಿಷ್ಟ ವೇತನ ಸಲಹಾ ಮಂಡಳಿ ಮೇ 22 ರಂದು ಅಂತಿಮ ಅಧಿಸೂಚನೆ ಪ್ರಕಟಿಸಿದೆ. 81 ನಿಗಧಿತ ಉದ್ಯೋಗಗಳಿಗೆ ಕನಿಷ್ಟ ವೇತನ ಜಾರಿಗೆ ಸರ್ಕಾರ ವಿವಿಧ ಇಲಾಖೆಗಳು, ವಸತಿ ನಿಲಯ, ನಿಗಮ ಮಂಡಳಿಗಳು, ವಿಶ್ವವಿದ್ಯಾಳಯದ ಹೊರಗುತ್ತಿಗೆ, ಗುತ್ತಿಗೆ ಕಾರ್ಮಿಕರಿಗೆ ಅನ್ವಯಿಸಿ ಆದೇಶಿಸಲಾಗಿದೆ.
ಆದರೆ ಆರ್ಥಿಕ ಇಲಾಖೆ ಆಕ್ಷೇಪದ ಹೆಸರಿನಲ್ಲಿ ಹೊಸ ಪರಿಷ್ಕೃತ ಕನಿಷ್ಟ ವೇತನ ಪಾವತಿಯನ್ನು ಸ್ಥಗಿತಗೊಳಿಸಲಾಗಿದೆ. ಕನಿಷ್ಟ ವೇತನ ಪರಿಷ್ಕರಣೆಯಿಂದ ಉದ್ಯಮಗಳು ಬೇರೆ ಬೇರೆ ರಾಜ್ಯಗಳಿಗೆ ವಲಸೆ ಹೋಗುತ್ತವೆ ಎಂದು ಹೇಳುತ್ತಿರುವದು ತರ್ಕಬದ್ದವಲ್ಲ. ಕಳೆದ 9 ವರ್ಷಗಳಿಂದ ಕನಿಷ್ಟ ವೇತನ ಪರಿಷ್ಕರಣೆಯಾಗಿಲ್ಲ.
2021-22 ರಲ್ಲಿಯೇ ಪರಿಷ್ಕರಣೆ ಆಗಬೇಕಿತ್ತು. ತ್ರಿಪಕ್ಷೀಯ ಕನಿಷ್ಟ ವೇತನ ಸಲಹಾ ಮಂಡಳಿ ವೈಜ್ಞಾನಿಕವಾಗಿ ಪರಿಷ್ಕರಣೆಗೆ ನಿರ್ಧರಿಸಿದೆ. ಸರ್ಕಾರ ವಿಳಂಬ ಧೋರಣೆ ಖಂಡಿಸಿ ರಾಜ್ಯದ ಎಲ್ಲಾ ಜಿಲ್ಲೆಗಳ ವಿವಿಧ ಕಾರ್ಮಿಕರು ಅಹೋರಾತ್ರಿ ಧರಣಿಗೆ ಬೆಂಗಳೂರಿಗೆ ಆಗಮಿಸಲಿದ್ದಾರೆ. ಗುತ್ತಿಗೆ, ಹೊರಗುತಿಗೆ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಘಟನೆ ಜಿಲಾಧ್ಯಕ್ಷ ಮಹೇಶ ಚಿಕಲಪರ್ವಿ,ಪ್ರಮುಖರಾದ ತಿರುಮಲರಾವ್, ಅಣ್ಣಪ್ಪ, ಗಾಯತ್ರಿ, ವೆಂಕಯ್ಯ, ಬಸವರಾಜ, ಜ್ಯೋತಿಬಸವ ಇದ್ದರು.