ಜಲಧಾರೆ ಕಾಮಗಾರಿ 15 ದಿನದೊಳಗೆ ಪೂರ್ಣಗೊಳಿಸಿ

ಸಿಂಧನೂರು ತಾಲೂಕಿನ ಸಾಲಗುಂದ ಪ್ರೌಢಶಾಲೆಯಲ್ಲಿ ಜಿಪಂ ಸಿಇಒ ಈಶ್ವರ ಕುಮಾರ ಕಾಂದೂ ಬಿಸಿಯೂಟ ಪರಿಶೀಲಿಸಿದರು. ತಾಪಂ ಇಒ ಚಂದ್ರಶೇಖರ, ಬಿಇಪ ಚಾಗಪ್ಪ ಇತರರಿದ್ದರು.
ಸಿಂಧನೂರು ತಾಲೂಕಿನ ಸಾಲಗುಂದ ಪ್ರೌಢಶಾಲೆಯಲ್ಲಿ ಜಿಪಂ ಸಿಇಒ ಈಶ್ವರ ಕುಮಾರ ಕಾಂದೂ ಬಿಸಿಯೂಟ ಪರಿಶೀಲಿಸಿದರು. ತಾಪಂ ಇಒ ಚಂದ್ರಶೇಖರ, ಬಿಇಪ ಚಾಗಪ್ಪ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಪಂ ಸಿಇಒ ಈಶ್ವರ ಕುಮಾರ ಕಾಂದೂ ಸೂಚನೆ
  • ಸಿಂಧನೂರು ಸಾಲಗುಂದಾ ದಢೇಸುಗೂರು ಗ್ರಾಪಂ ಭೇಟಿ
ಸಿಂಧನೂರು; ನಗರ ಹಾಗೂ ಹೊಸಳ್ಳಿ ಇ.ಜೆ., ಸಾಲಗುಂದಾ ಮತ್ತು ದಢೇಸುಗೂರು ಗ್ರಾಪಂ ವ್ಯಾಪ್ತಿಯ ಗ್ರಾಮಗಳಿಗೆ ಜಿಪಂ ಸಿಇಒ ಈಶ್ವರ ಕುಮಾರ ಕಾಂದೂ ಭೇಟಿ ನೀಡಿ ಕಾಮಗಾರಿಗಳನ್ನು ಪರಿಶೀಲಿಸಿದರು. ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಗ್ರಾಪಂ ಅರಿವು ಕೇಂದ್ರಕ್ಕೆ ಭೇಟಿ ನೀಡಿ ಮೂಲಸೌಕರ್ಯ ವೀಕ್ಷಿಸಿದರು.
ನಗರದ ತಾಪಂ ಆವರಣದಲ್ಲಿರುವ ಅಕ್ಕ ಕೆಫೆ, ಸಂಜೀವಿನಿ ಇ-ಮಾರ್ಟ್‌ಗಳಿಗೆ ಭೇಟಿ ನೀಡಿ ವ್ಯಾಪಾರ-ವಹಿವಾಟು ಹೆಚ್ಚಿಸಲು ಸೂಕ್ತ ಕ್ರಮ ವಹಿಸುವಂತೆ ನಿರ್ದೇಶನ ನೀಡಿದರು. ಸೂಪರ್ ಮಾರ್ಕೆಟ್ ನಿರ್ಮಾಣ ಕಾಮಗಾರಿ ಪರಿಶೀಲಿಸಿ, ಗುಣಮಟ್ಟದ ಕಾಮಗಾರಿಯೊಂದಿಗೆ ನಿಗದಿತ ಅವಧಿಯಲ್ಲಿ ಕಾಮಗರಿ ಪೂರ್ಣಗೊಳಿಸಲು ಸೂಚಿಸಿದರು. ಸಾಸಲಮರಿ ಕ್ಯಾಂಪಿನ ಜಲಧಾರೆ ಯೋಜನೆಯ ಕಾಮಗಾರಿ ಪರಿಶೀಲಿಸಿ 15 ದಿನದೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸಾಲಗುಂದ ಗ್ರಾಪಂ ವ್ಯಾಪ್ತಿಯಲ್ಲಿ ವಿಬಿ ಜಿ ರಾಮ್ ಜಿ ಯೋಜನೆಯಡಿ ಕಾಲವೆ ಅಭಿವೃದ್ಧಿ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಹಾಜರಾತಿ ಮತ್ತು ಕಾಮಗಾರಿ ಅಳತೆಗಳನ್ನು ಪರಿಶೀಲಿಸಿ, ಕೂಲಿಕಾರರೊಂದಿಗೆ ಸಂವಾದ ನಡೆಸಿದರು. ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೆೇಟಿ ನೀಡಿ ದಾಖಲೆಗಳನ್ನು ಸರಿಯಾಗಿ ನಿರ್ವಹಿಸುವಂತೆ ಮತ್ತು ಆಸ್ಪತ್ರೆಗೆ ಬರುವ ಜನರಿಗೆ ಉತ್ತಮ ಸೇವೆ ನೀಡುವಂತೆ ಸಿಬ್ಬಂದಿಗೆ ಸೂಚಿಸಿದರು.
ಸಾಲಗುಂದ-ಕೆಂಗಲ್ ರಸ್ತೆಯ ಅರಣ್ಯ ಇಲಾಖೆ ಕಾಮಗಾರಿ, ಗ್ರಂಥಾಲಯ ಹಾಗೂ ಗ್ರಾಮದ ಕುಡಿಯುವ ನೀರಿನ ಸಮಸೆ ್ಯಗಳನ್ನು ಪರಿಹರಿಸಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ನಂತರ ಪ್ರೌಢಶಾಲೆಗೆ ಭೇಟಿ ನೀಡಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಆಹಾರ ಪರಿಶೀಲಿಸಿ, ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಸೂಚಿಸಿದರು. ದಢೇಸುಗೂರು ಗ್ರಾಪಂ ಮತ್ತು ಗ್ರಂಥಾಲಯಕ್ಕೆ ಭೇಟಿ ನೀಡಿ ದಾಖಲೆಗಳನ್ನು ಸರಿಯಾಗಿ ನಿರ್ವಹಿಸುವಂತೆ ನಿರ್ದೇಶನ ನೀಡಿದರು.

ತಾಪಂ ಇಒ ಚಂದ್ರಶೇಖರ, ನರೇಗಾ ಸಹಾಯಕ ಯೋಜನಾಧಿಕಾರಿ ಯಂಕಪ್ಪ, ಸಹಾಯಕ ಕೃಷಿ ನಿರ್ದೇಶಕ ರುದ್ರಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಚಾಗಪ್ಪ, ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷೆ ಶ್ರೀದೇವಿ ಶ್ರೀನಿವಾಸ, ಟಿಪಿಒ, ಆರ್‌ಎಫ್‌ಒ, ಪಿಡಿಒಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net