

ರಾಯಚೂರು: ವೈಟಿಒಪಿಎಸ್ ಕೇಂದ್ರವನ್ನು ಖಾಸಗಿ ಕಂಪನಿಗೆ ನೀಡಿದಾಗಿನಿಂದ ಇಲ್ಲಿನ ಕಾರ್ಮಿಕರಿಗೆ ದೊರೆಯಬೇಕಾದ ಸೌಲಭ್ಯಗಳು ಇಲ್ಲದೇ ಕಾರ್ಮಿಕರಿಗೆ ಅನ್ಯಾಯವಾಗಿದೆ ಎಂದು ಆರ್‌ಪಿಸಿಎಲ್, ವೈಟಿಪಿಎಸ್ ಗುತ್ತಿಗೆ ನೌಕರರ ಸಂಘದಿಂದ ವೈಟಿಪಿಎಸ್ ಕೇಂದ್ರದ ಎದುರು ಸೋಮವಾರ ಅನಿರ್ಧಿಷ್ಠಾವಧಿ ಧರಣಿ ಹಮ್ಮಿಕೊಳ್ಳಲಾಯಿತು.
ನಿಯಮಾನುಸಾರ ಗುತ್ತಿಗೆ ಕಾರ್ಮಿಕರಿಗೆ ನಿಡಬೇಕಾದ ವೇತನ, ಗ್ರಾೃಚ್ಯುಟಿ, ಭತ್ಯೆ ಸೇರಿದಂತೆ ಇತರೆ ಸೌಲಭ್ಯಗಳನ್ನು ನೀಡಲಾಗುತ್ತಿಲ್ಲ. ಈ ಬಗ್ಗೆ ಅನೇಕ ಬಾರಿ ಕಂಪನಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಮನವಿಗೆ ಸ್ಪಂಧಿಸುತ್ತಿಲ್ಲ. ಗುತ್ತಿಗೆ ಕಾರ್ಮಿಕರಿಗೆ ಕನಿಷ್ಠ ವೇತನ ಜಾರಿಗೊಳಿಸಲಾಗಿದ್ದರೂ. ವೇತನ ನೀಡಿಲ್ಲ. ಸೇವಾ ಭದ್ರತೆಯಿಲ್ಲದೇ ಇಲ್ಲಿನ ಕಾರ್ಮಿಕರು ಕಂಗಾಲಾಗಿದ್ದು, ಸಂಕಷ್ಟದಲ್ಲಿದ್ದಾರೆ ಎಂದು ಕಾರ್ಮಿಕರು ಆಕ್ರೋಶ ಹೊರ ಹಾಕಿದರು.
ಕಾರ್ಮಿರಿಂದ ಸುರಕ್ಷಾ ಕ್ರಮಗಳನ್ನು ಅನುಸರಿಸದೇ ಕೆಲಸ ಪಡೆದುಕೊಳ್ಳಲಾಗುತ್ತಿದ್ದು, ಗುತ್ತಿಗೆ ಷರತ್ತುಗಳನ್ನು ಉಲ್ಲಂಘಿಸಲಾಗುತ್ತಿದೆ. ವೇತನ ಪರಿಷ್ಕರಣೆ, ಸಕಾಲಕ್ಕೆ ವೇತನ ಪಾವತಿ, ಕಾರ್ಮಿಕರ ಸುರಕ್ಷತೆಗೆ ಕಂಪನಿ ಕೂಡಲೇ ಕ್ರಮ ಕೈಗೊಂಡು ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಪ್ರಮುಖರಾದ ಮಲ್ಲಪ್ಪಗೌಡ, ಶಿವಾನಂದ, ಜುವಲ್‌ರೆಡ್ಡಿ, ಹುಸೇನ್ ಬಾಷಾ, ಮಂಜುನಾಥ, ಶಿವರಾಜ್, ಬೂದಿಬಸವ ಸೇರಿದಂತೆ ಇತರರಿದ್ದರು.