ಮುಂದುವರಿದ ಟೋಲ್ ಪ್ರತಿಭಟನೆ : ವಾಹನ ಮನೆಗೆ ತಲುಪಿದ ಬಳಿಕ ಶುಲ್ಕ ಕಡಿತ

protest
Published on

ಕೋಟ: ಸಾಸ್ತಾನ ಟೋಲ್‌ನಲ್ಲಿ ಸ್ಥಳೀಯ ವಾಹನಗಳಿಗೆ ಟೋಲ್ ವಸೂಲಿ ಮಾಡುತ್ತಿರುವುದನ್ನು ಖಂಡಿಸಿ ಹೆದ್ದಾರಿ ಜಾಗೃತಿ ಸಮಿತಿ ಸದಸ್ಯರು ಮತ್ತು ಸ್ಥಳೀಯರು ಹೋರಾಟ ತೀವ್ರಗೊಳಿಸಿದ್ದು ಭಾನುವಾರವೂ ಪ್ರತಿಭಟನೆ ಮುಂದುವರಿಯಿತು.

ಸ್ಥಳೀಯ ವಾಹನ ಮಾಲೀಕರು ವಾಹನ ಅಡ್ಡ ಇರಿಸಿ ಪ್ರತಿಭಟಿಸಿದರು. ಶುಕ್ರವಾರ ವಾಹನ ಮಾಲೀಕ ರಾಜೇಶ್ ಕೆ.ವಿ ಸಾಸ್ತಾನ ಅವರ ವಾಹನ ಟೋಲ್‌ಗೇಟ್ ಪಾಸಾದ ಸಂದರ್ಭ ಜೀರೋ ಬ್ಯಾಲೆನ್ಸ್ ತೋರಿಸಿತ್ತು. ಮರುದಿನ ಖಾತೆಯಿಂದ 60 ರೂ. ಕಟ್ ಆಗಿರುವ ಸಂದೇಶ ಬಂದಿದ್ದು, ಆಕ್ರೋಶಗೊಂಡ ಅವರು ಭಾನುವಾರ ಕಾರನ್ನು ಟೋಲ್‌ಗೆ ಅಡ್ಡ ಇರಿಸಿ ಪ್ರತಿಭಟಿಸಿದರು. ಈ ಸಂದರ್ಭ ಟೋಲ್ ಸಿಬ್ಬಂದಿ ಹಾಗೂ ರಾಜೇಶ್ ನಡುವೆ ಮಾತಿನ ಚಕಮಕಿ ನಡೆಯಿತು.

ಟೋಲ್‌ಗೇಟ್‌ನಲ್ಲಿ ಸಾಲು ಸಾಲು ವಾಹನ ನಿಂತಿರುವುದನ್ನು ಗಮನಿಸಿದ ಸಿಬ್ಬಂದಿ ಹಣ ವಾಪಸ್ ನೀಡಿದರು. ಸೋಮವಾರ ಸಮಸ್ಯೆ ಕುರಿತು ಕಂಪನಿ ಪ್ರಮುಖರ ಮೂಲಕ ಮಾತುಕತೆ ನಡೆಯಲಿದೆ. ಅಲ್ಲಿಯವರೆಗೆ ಯಾವುದೇ ರೀತಿ ಸಮಸ್ಯೆ ಮಾಡದಂತೆ ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net