ಬಾಗಲಕೋಟೆಯಲ್ಲಿ ಸಿಎಎ ಪರ ನಾಮಫಲಕ ಪ್ರದರ್ಶಿಸಿ ಎಲ್ಲರ ಗಮನ ಸೆಳೆದ ನವಜೋಡಿ

Pro CAA
Published on

ಬಾಗಲಕೋಟೆ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆಗಳು ದೇಶದ ಹಲವೆಡೆ ಮುಂದುವರಿದಿವೆ. ಕೇರಳದಲ್ಲಿ ಈ ಹಿಂದೆ ನವಜೋಡಿಗಳು ಸಿಎಎ ವಿರೋಧಿ ಫಲಕವನ್ನು ಹಿಡಿದು ಗಮನ ಸೆಳೆದಿದ್ದರು. ಇದೀಗ ಕರ್ನಾಟಕದ ನವಜೋಡಿಯೊಂದು ಸಿಎಎ ಪರ ಫಲಕವನ್ನು ಪ್ರದರ್ಶಿಸಿ ವಿಭಿನ್ನತೆ ಮೆರೆದಿದ್ದಾರೆ.

ಬಾಗಲಕೋಟೆ ಚರಂತಿಮಠ ಕಲ್ಯಾಣ ಮಂಟಪದಲ್ಲಿ ನಡೆದ ಮದುವೆಯಲ್ಲಿ ಸಿಎಎ ನಾಮಫಲಕ ಪ್ರದರ್ಶಿಸಲಾಯಿತು.

ಆನಂದ ಹಂಡಿ ಹಾಗೂ ದೇವಿಕಾ ಪೂಜಾರಿ ಎಂಬ ನವಜೋಡಿ ಮದುವೆ ಸಮಾರಂಭದ ನಡುವೆ ಸಿಎಎ ಪರ ಫಲಕ ಪ್ರದರ್ಶಿಸಿ ಗಮನ ಸೆಳೆದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net