

ಉಳ್ಳಾಲ: ಕೇಂದ್ರ ಸರ್ಕಾರ ಸಾಕಷ್ಟು ಜನಪರ ಯೋಜನೆ ಜಾರಿಗೆ ತಂದಿದ್ದು ಜನರಿಗೆ ಅರಿವು ಮೂಡಿಸುವ ಕೆಲಸ ಅಗತ್ಯ, ಭಜನಾ ಮಂದಿರದಿಂದ ಆಯೋಜಿಸಿರುವ ಕಾರ್ಯಕ್ರಮದ ಮೂಲಕ ಹಿಂದು ಸಮಾಜ, ಹಿಂದುತ್ವಕ್ಕೆ ಶಕ್ತಿ ಕೊಡುವ ಕೆಲಸ ಆಗಲಿ ಎಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದರು.
ತಲಪಾಡಿ ದೇವಿನಗರ ಶ್ರೀ ಅವಿನಾಶಿ ಭಜನಾ ಮಂದಿರ ಹಾಗೂ ಭಾರತೀಯ ಅಂಚೆ ಇಲಾಖೆ ಮಂಗಳೂರು ವಿಭಾಗದ ಸಹಯೋಗದಲ್ಲಿ ಭಾನುವಾರ ಶ್ರೀ ಅವಿನಾಶಿ ಭಜನಾ ಮಂದಿರದಲ್ಲಿ ನಡೆದ ಅಂಚೆ ಜನಸಂಪರ್ಕ ಅಭಿಯಾನ, ಆಧಾರ್ ನೋಂದಣಿ ಮತ್ತು ತಿದ್ದುಪಡಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಬಿಜೆಪಿ ಮಂಡಲ ಅಧ್ಯಕ್ಷ ಜಗದೀಶ್ ಆಳ್ವ ಕೂವೆತ್ತಬೈಲ್ ಮಾತನಾಡಿ, ಪ್ರಧಾನಿ ಮೋದಿಯವರು 1800 ಯೋಜನೆ ಜಾರಿಗೆ ತಂದಿದ್ದು ಜನಸಾಮಾನ್ಯರಿಗೆ ತಿಳಿಸಬೇಕಾದರೆ ಸಂಘ-ಸಂಸ್ಥೆಗಳು ಕಾರ್ಯಕ್ರಮ ನಡೆಸುವ ಮೂಲಕ ಸಹಕಾರ ನೀಡಬೇಕು ಎಂದರು.
ಅಂಚೆ ಇಲಾಖೆ ನಿರೀಕ್ಷಕಿ ಸುಪ್ರಿಯಾ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಮೈಸೂರು ಇಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್ ರೈ, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ದಯಾನಂದ ತೊಕ್ಕೊಟ್ಟು, ಪ್ರಗತಿಪರ ಕೃಷಿಕ ನಾರಾಯಣ ಕಿಲ್ಲೆ, ಕಿನ್ಯ ಕೇಶವ ಶಿಶು ಮಂದಿರ ವ್ಯವಸ್ಥಾಪಕ ನಾರಾಯಣ ಕಜೆ, ಬಿಜೆಪಿ ಮಂಜನಾಡಿ ಮಹಾಶಕ್ತಿ ಕೇಂದ್ರ ಅಧ್ಯಕ್ಷ ನಿತ್ಯಾನಂದ ಭಂಡಾರಿ, ಅವಿನಾಶಿ ಮಹಾದೇವ ಭಜನಾ ಮಂದಿರ ಅಧ್ಯಕ್ಷ ಯುವರಾಜ್ ದೇವಾಡಿಗ ಉಪಸ್ಥಿತರಿದ್ದರು.
ತಲಪಾಡಿ ಗ್ರಾಪಂ ಮಾಜಿ ಅಧ್ಯಕ್ಷ ಸುರೇಶ್ ಆಳ್ವ ಸಾಂತ್ಯಗುತ್ತು ಸ್ವಾಗತಿಸಿ. ಕ್ರೀಡಾ ಸಂಚಾಲಕ ಅಶ್ವಿತ್ ವಂದಿಸಿ, ಗೋಪಾಲ ಕೃಷ್ಣ ಮೇಲಾಂಟ ನಿರೂಪಿಸಿದರು.