ಏಮ್ಸ್ ಮಂಜೂರು ರಾಜ್ಯದ ಸಂಸದರಿAದ ಸಕರಾತ್ಮಕ ಪ್ರತಿಕ್ರಿಯೆ

BASAVARAJA KALAS
BASAVARAJA KALAS
Published on

 ರಾಯಚೂರು ಜಿಲ್ಲೆಯಲ್ಲಿ ಏಮ್ಸ್ ಸ್ಥಾಪನೆ ಕುರಿತು ದೆಹಲಿಯಲ್ಲಿ ಕರ್ನಾಟಕದ ಸಂಸದರನ್ನು ಭೇಟಿ ಮಾಡಲಾಗಿದ್ದು, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಸೇರಿ ಎಲ್ಲಾ ಸಂಸದರಿAದಲೂ ಸಕರಾತ್ಮಕ ಪ್ರತಿಕ್ರಿಯೆ ದೊರೆತಿದೆ ಎಂದು ಏಮ್ಸ್ ಹೋರಾಟ ಸಮಿತಿಯ ಪ್ರಧಾನ ಸಂಚಾಲಕ ಬಸವರಾಜ ಕಳಸ ಹೇಳಿದರು.

ನಗರದ ಪತ್ರಿಕಾ ಭನದಲ್ಲಿ ಗುರುವಾರ ಮಾತನಾಡಿ, ಜಿಲ್ಲೆಯಲ್ಲಿ ಏಮ್ಸ್ ಸ್ಥಾಪನೆಯಾಗಬೇಕೆಂದು ನಡೆಯುತ್ತಿರುವ ಸುಽÃರ್ಘ ಹೋರಾಟದ ಭಾಗವಾಗಿ ಇತ್ತೀಚೆಗೆ ಹೋರಾಟ ಸಮಿತಿ ದೆಹಲಿಗೆ ನಿಯೋಗ ತೆರಳಿದ್ದು, ಒಟ್ಟು ೧೧ ಜನರ ನಿಯೋಗ ದೆಹಲಿಯಲ್ಲಿ ೨೮ ಜನ ಕರ್ನಾಟಕದ ಲೋಕಸಭಾ ಸದಸ್ಯರನ್ನು ಭೇಟಿ ಮಾಡುವ ಹಾಗೂ ೧೪ ಜನ ರಾಜ್ಯಸಭಾ ಸದಸ್ಯರನ್ನು ಭೇಟಿಯಾಗುವ ಯೋಜನೆಯನ್ನು ನಿಯೋಗ ಹೊಂದಿತ್ತು.

ಬಹುತೇಕ ಎಲ್ಲಾ ಸಂಸದರನ್ನು ಭೇಟಿ ಮಾಡಲಾಗಿದ್ದು, ಎಲ್ಲಾ ಸಂಸದರೂ ಕೂಡ ರಾಯಚೂರಿಗೆ ಏಮ್ಸ್ ಮಂಜೂರು ಮಾಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿರುವುದು, ಸಂಸದರ ಪ್ರತಿಕ್ರಿಯೆ ಸಕರಾತ್ಮಕ ಆಶಾಭಾವನೆಯನ್ನು ಮೂಡಿಸಿದೆ ಎಂದರು.

ಮಾಜಿ ಪ್ರದಾನಿ ದೇವೇಗೌಡ ಅವರೂ ಕೂಡ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ರಾಯಚೂರಿಗೆ ಏಮ್ಸ್ ಮಂಜೂರು ಮಾಡಲು ಮನವಿ ಮಾಡಿಕೊಳ್ಳುವೆ ಎಂದು ಹೇಳಿದ್ದಾರೆ. ಈ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿಯವರನ್ನೂ ಭೇಟಿ ಮಾಡಲಾಗಿದೆ. ಅವರಿಂದಲೂ ಕೂಡ ಸಕಾರಾತ್ಮಕ ಮಾತುಗಳು ಕೇಳಿಬಂದಿವೆ. ಅವರು ಹೇಳಿದ ಹಾಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರಸ್ತುತ ಈಗ ಆರಂಬವಾಗಿರುವ ಏಮ್ಸ್ ಕಾಮಗಾರಿಗಳತ್ತ ಗಮನಹರಿಸುತ್ತಿದ್ದು,

ಕರ್ನಾಟಕಕ್ಕೆ ಏಮ್ಸ್ ಮಂಜೂರಾಗುವ ವಿಷಯ ಬಂದಾಗ ರಾಯಚೂರಿಗೆ ಮೊದಲ ಆಧ್ಯತೆ ನೀಡಲಾಗುವುದು ಎಂದು ತಿಳಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಅಶೋಕ ಕುಮಾರ ಜೈನ್, ಬೆಂಜಮನ್ ಥಾಮಸ್, ವಿನಯಕುಮಾರ ಚಿತ್ರಗಾರ, ಎಂ.ಆರ್ ಭೇರಿ, ಸಂತೋಷಕುಮಾರ ಮಿರ್ಜಾಪೂರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net