ಪೊಲೀಸ್ ಠಾಣೆ ಎದುರಿನ ಮೊಬೈಲ್ ಅಂಗಡಿಗೆ ಕಳ್ಳರ ಕನ್ನ !, ಲ್ಯಾಪ್‌ಟಾಪ್, ಮೊಬೈಲ್ ಕಳವು

050220 Jalahalli Mobile Shopt Theft
Published on

ದೇವದುರ್ಗ: ತಾಲೂಕಿನ ಜಾಲಹಳ್ಳಿ ಪೊಲೀಸ್ ಠಾಣೆ ಎದುರಿನ ಮೊಬೈಲ್ ಅಂಗಡಿಗೆ ಮಂಗಳವಾರ ತಡರಾತ್ರಿ ಕಳ್ಳರು ಕನ್ನ ಹಾಕಿದ್ದು, 38 ಸಾವಿರ ರೂ. ಮೌಲ್ಯದ ವಸ್ತುಗಳನ್ನು ಕದ್ದು ಪರಾರಿಯಾಗಿದ್ದಾರೆ.

ಮೊಬೈಲ್ ಡಬ್ಬಿ ಅಂಗಡಿಯ ಬೀಗ ಮುರಿದು ಒಂದು ಲ್ಯಾಪ್‌ಟಾಪ್, ಆರು ಫೋನ್‌ಗಳು ಸೇರಿ ವಿವಿಧ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ. ಠಾಣೆ ಎದರಿಗೇ ಈ ಘಟನೆ ನಡೆದಿದ್ದು, ಸಾರ್ವಜನಿಕರ ಚರ್ಚೆಗೆ ಗ್ರಾಸವಾಗಿದೆ. ಎರಡು ತಿಂಗಳಿನಿಂದ ಠಾಣೆ ವ್ಯಾಪ್ತಿಯಲ್ಲಿ ಹಲವು ಕಳ್ಳತನ ಪ್ರಕರಣಗಳು ದಾಖಲಾಗಿವೆ. ಒಂದು ತಿಂಗಳಿನಿಂದ ಠಾಣೆಗೆ ಕಾಯಂ ಪಿಎಸ್‌ಐ ಇರದ ಕಾರಣ ಕಳ್ಳರಿಗೆ ಭಯ ಇಲ್ಲದಂತಾಗಿದೆ.

ಈ ಹಿಂದೆ ಬಸ್ ನಿಲ್ದಾಣ ಹಿಂಭಾಗದ ಮದ್ಯದಂಗಡಿ, ಬಟ್ಟೆ ಶಾಫ್, ಕಿರಾಣಿ, ಮೊಬೈಲ್ ಅಂಗಡಿ ಸೇರಿ ಐದಾರು ಅಂಗಡಿಗಳಲ್ಲಿ ಕಳ್ಳತನವಾಗಿತ್ತು. ಪೆಟ್ರೋಲ್ ಬಂಕ್ ಹತ್ತಿರದ ಮನೆಯಲ್ಲಿ ಎರಡು ಲಕ್ಷ ರೂ. ಕಳ್ಳತನವಾಗಿತ್ತು. ಈವರೆಗೂ ಕಳ್ಳರನ್ನು ಪತ್ತೆ ಹಚ್ಚಿಲ್ಲ. ಇದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎನ್ನುವುದು ಜನರ ಆರೋಪ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net