ಪಿಐ ಮತ್ತು ಎಎಸ್​ಐ ಗಲಾಟೆ ವಿಡಿಯೋ ವೈರಲ್: ಕರ್ತವ್ಯದ ವೇಳೆ ಪರಸ್ಪರ ನಿಂದನೆ

Quarelling 13 APR 20
Published on

ಬೆಂಗಳೂರು: ಲಾಕ್​ಡೌನ್ ಬಂದೋಬಸ್ತ್ ಡ್ಯೂಟಿಯಲ್ಲಿ ತೊಡಗಿದ್ದ ಪೊಲೀಸ್ ಅಧಿಕಾರಿಗಳಿಬ್ಬರು ಪರಸ್ಪರ ನಿಂದಿಸಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸದ್ದುಗುಂಟೆಪಾಳ್ಯ ಠಾಣೆ ಇನ್​ಸ್ಪೆಕ್ಟರ್ ರಮೇಶ್ ಮತ್ತು ಎಎಸ್​ಐ ನಡುವೆ ಮಾತಿಗೆ ಮಾತು ಬೆಳೆದು ವೈಯಕ್ತಿಕವಾಗಿ ಪರಸ್ಪರ ನಿಂದಿಸಿಕೊಂಡಿದ್ದಾರೆ. ಬಂದೋಬಸ್ತ್ ಡ್ಯೂಟಿ ಸರಿಯಾಗಿ ನಿರ್ವಹಿಸುತ್ತಿಲ್ಲ ಎಂಬ ಕಾರಣಕ್ಕೆ ಎಎಸ್​ಐ ಮೇಲೆ ಇನ್​ಸ್ಪೆಕ್ಟರ್ ಗರಂ ಆಗಿ ನಡು ರಸ್ತೆಯಲ್ಲಿ ನಿಂದಿಸಿದ್ದಾರೆ. ಇದಕ್ಕೆ ಎಎಸ್​ಐ, ‘ನಾವು ಟೈಂ ನೋಡದೆ ಕೆಲಸ ಮಾಡಿದರೂ ನಿಮ್ಮ ಟಾರ್ಚರ್ ಸಹಿಸಿಕೊಳ್ಳೋದಕ್ಕೆ ಆಗೋದಿಲ್ಲ’ ಎಂದು ಇನ್​ಸ್ಪೆಕ್ಟರ್​ಗೆ ಪ್ರತಿಕ್ರಿಯಿಸಿದ್ದಾರೆ.

ಇಷ್ಟಕ್ಕೆ ಆಕ್ರೋಶಗೊಂಡ ಇನ್​ಸ್ಪೆಕ್ಟರ್, ಎಎಸ್​ಐಗೆ ಅವಾಚ್ಯವಾಗಿ ನಿಂದಿಸಿದ್ದಾರೆ. ಅಲ್ಲದೆ, ನಿಮ್ಮ ಮೇಲೆ ರಿಪೋರ್ಟ್ ಹಾಕ್ತೀನಿ ಎಂದು ಬೆದರಿಸಿದ್ದಾರೆ. ಇತರೆ ಸಿಬ್ಬಂದಿ ಮಧ್ಯಪ್ರವೇಶಿಸಿ ಸಮಾಧಾನಪಡಿಸಿದರೂ ಜಗಳ ಕಡಿಮೆ ಆಗುವುದಿಲ್ಲ. ‘ಡಿಪಾರ್ಟ್​ವೆುಂಟ್​ನಲ್ಲಿ ನಿಮಗಿಂತ ಜಾಸ್ತಿ ಸರ್ವೀಸ್ ಮಾಡಿದ್ದೇನೆ. ನಿಮ್ಮಿಂದ ಹೇಳಿಸಿಕೊಳ್ಳೋದು ನಮಗೇನು ಇಲ್ಲ’ ಎಂದು ಎಎಸ್​ಐ ತಿರುಗೇಟು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net