ಪಡುಬಿದ್ರಿ ಬ್ಲೂಫ್ಲ್ಯಾಗ್ ಬೀಚ್ ರಸ್ತೆ ಟ್ರಾಫಿಕ್ ಜಾಮ್

padubidri new
Published on

ಪಡುಬಿದ್ರಿ: ಬ್ಲೂಫ್ಲ್ಯಾಗ್ ಬೀಚ್ ಆಗಿ ಅಂತಾರಾಷ್ಟ್ರೀಯ ಮಾನ್ಯತೆ ಪಡೆದಿರುವ ಪಡುಬಿದ್ರಿ ಎಂಡ್ ಪಾಯಿಂಟ್ ಬೀಚ್‌ಗೆ ಭಾನುವಾರ ಒಂದೇ ದಿನ 2750 ಜನ ಭೇಟಿ ನೀಡಿದ್ದು, ಕಳೆದ ಭಾನುವಾರ 2500 ಜನ ಭೇಟಿ ನೀಡಿದ್ದರು.

ಬೀಚ್‌ಗೆ ದಿನದಿಂದ ದಿನಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಪಡುಬಿದ್ರಿ ಹೆದ್ದಾರಿಯಿಂದ ಬೀಚ್ ಸಂಪರ್ಕಿಸುವ ರಸ್ತೆ ಅಗಲ ಕಿರಿದಾಗಿರುವ ಕಾರಣ ಕಿಲೋ ಮೀಟರ್‌ಗಟ್ಟಲೇ ವಾಹನ ಸಂಚಾರ ದಟ್ಟಣೆ ಹೆಚ್ಚಾಗಿ ಜನ ತೊಂದರೆಪಟ್ಟರು.

ಅಂತರಾಷ್ಟ್ರೀಯ ಮಾನ್ಯತೆ ದೊರೆತ ಬಳಿಕ ಬೀಚ್‌ನಲ್ಲಿ ಪ್ರವಾಸಿಗರ ಸಂಖ್ಯೆ ದ್ವಿಗುಣಗೊಂಡಿದ್ದು, ಕರೊನಾ ಮರೆತು ದೂರದೂರುಗಳಿಂದ ಪ್ರವಾಸಿಗರು ರಜಾ ದಿನ ಕಳೆಯಲು ಇಲ್ಲಿಗಾಗಮಿಸುತ್ತಿದ್ದು, ಸಂಚಾರ ದಟ್ಟಣೆ ನಿಯಂತ್ರಿಸಲು ಬೆರಳೆಣಿಕೆಯಲ್ಲಿದ್ದ ಪೊಲೀಸರು ಹಾಗೂ ಬೀಚ್ ಸಿಬ್ಬಂದಿ ಹರಸಾಹಸ ಪಡುವಂತಾಗಿದೆ. ಸುಗಮ ಸಂಚಾರ ದೃಷ್ಟಿಯಿಂದ ಬೀಚ್ ಸಂಪರ್ಕಿಸುವ ಪ್ರಮುಖ ರಸ್ತೆ ಶೀಘ್ರ ವಿಸ್ತರಣೆಯಾಗದಿದ್ದಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ಸಮಸ್ಯೆಯಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net