ವಿಟ್ಲ: ಪದ್ಮಶಾಲಿ ಸೇವಾ ಸಮಿತಿ ಕಾಡಮಠ ವಿಟ್ಲ ವಲಯ ವಾರ್ಷಿಕೋತ್ಸವ ಮತ್ತು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಕುಡ್ತ ಮುಗೇರು ವಿಜಯಶ್ರೀ ಕಲ್ಯಾಣ ಮಂಟಪದಲ್ಲಿ ನಡೆಯಿತು.
ಸಮಾಜದ ಮುಂದಾಳು ಜನಾದನ ಪದ್ಮಶಾಲಿ ಅಧ್ಯಕ್ಷತೆ ವಹಿಸಿ, ಪದ್ಮಶಾಲಿ ಸಮಾಜವು ಶೈಕ್ಷಣಿಕ, ಸಾಮಾಜಿಕವಾಗಿ ಮುಂದುವರಿಯಬೇಕು ಎಂದು ತಿಳಿಸಿದರು.
ಎಂಬಿಎಯಲ್ಲಿ ದ್ವಿತೀಯ ರ್‍ಯಾಂಕ್ ಪಡೆದ ಬೆನಕ ಶೆಟ್ಟಿಗಾರ್ ಉಡುಪಿ, ಎಸ್‌ಎಸ್‌ಎಲ್‌ಸಿಯಲ್ಲಿ ರಾಜ್ಯಕ್ಕೆ ದ್ವಿತೀಯ ರ್‍ಯಾಂಕ್ ಪಡೆದ ಹನ್ಸಿಕಾ ಬನಾರಿ ಅವರನ್ನು ಅಭಿನಂದಿಸಲಾಯಿತು. ಬಂಗ್ರಮಂಜೇಶ್ವರ ಗುರುಕಾರ ರಾಮ ಶೆಟ್ಟಿಗಾರ್ ಯಾನೆ ಮೋಹನ ಶೆಟ್ಟಿಗಾರ್, ವೀರಭದ್ರ ಮಹಮ್ಮಾಯಿ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಗುರುಪ್ರಸಾದ್ ಕೊಡಿಬೈಲ್, ಪದ್ಮಶಾಲಿ ಯುವವೇದಿಕೆ ಅಧ್ಯಕ್ಷ ಕಿಶೋರ್ ಕುಮಾರ್ ಉದ್ಯಾವರ, ಮಹಿಳಾ ವೇದಿಕೆ ಅಧ್ಯಕ್ಷೆ ಸಾವಿತ್ರಿ ಭಾಸ್ಕರ ಶೆಟ್ಟಿಗಾರ್ ಉದ್ಯಾವರ, ಬಾಬು ಶೆಟ್ಟಿಗಾರ್, ರಮೇಶ್ ಶೆಟ್ಟಿಗಾರ್ ಉಪಸ್ಥಿತರಿದ್ದರು. ಮಾಜಿ ಅಧ್ಯಕ್ಷ ತುಕಾರಾಮ ಶೆಟ್ಟಿಗಾರ್ ಸ್ವಾಗತಿಸಿದರು. ಕಾರ್ಯದರ್ಶಿ ರಾಜಶೇಖರ ಪಾಲ್ತಾಜೆ ವರದಿ ವಾಚಿಸಿದರು. ಮಾಜಿ ಕಾರ್ಯದರ್ಶಿ ವರದರಾಜ ಶೆಟ್ಟಿಗಾರ್ ವಂದಿಸಿದರು. ಮನೋರಂಜನ್ ಕರೈ ಸನ್ಮಾನ ಪತ್ರ ವಾಚಿಸಿದರು. ಡಾ.ಲೋಕರಾಜ ವಿ.ಎಸ್. ಕಾರ್ಯಕ್ರಮ ನಿರೂಪಿಸಿದರು.