ಪ್ರವೀಣ್​ ನೆಟ್ಟಾರು ಹತ್ಯೆ: ತಲೆಮರೆಸಿಕೊಂಡಿರುವ PFI ಸದಸ್ಯರ ಸುಳಿವು ಕೊಟ್ಟವರಿಗೆ ನಗದು ಬಹುಮಾನ ಘೋಷಿಸಿದ NIA

praveen nettaru
Published on

ವಿಟ್ಲ(ದಕ್ಷಿಣ ಕನ್ನಡ): ಪ್ರವೀಣ್​ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ನಾಲ್ವರು ಪಿಎಫ್​ಐ ಸದಸ್ಯರನ್ನು ಹುಡುಕಿಕೊಟ್ಟವರಿಗೆ ನಗದು ಬಹುಮಾನ ನೀಡುವುದಾಗಿ ರಾಷ್ಟ್ರೀಯ ತನಿಖಾ ದಳ (ಎನ್​ಐಎ) ಘೋಷಿಸಿದೆ.

ಬೆಳ್ಳಾರೆ ಬೂಡು ನಿವಾಸಿ ಮೊಹ್ಮದ್​ ಮುಸ್ತಫ ಎಸ್​. ಅಲಿಯಾಸ್​ ಮುಸ್ತಫ ಪೈಚಾರು ಹಾಗೂ ಮಡಿಕೇರಿ ಗದ್ದಿಗೆ ಮಸೀದಿ ಹಿಂಭಾಗದ ನಿವಾಸಿ ಎಂ.ಎಚ್​. ತುಫೈಲ್​ನನ್ನು ಹುಡುಕಿಕೊಟ್ಟವರಿಗೆ ತಲಾ 5 ಲಕ್ಷ ರೂ., ಸುಳ್ಯ ನಗರ ಕಲ್ಲುಮುಟ್ಟು ನಿವಾಸಿ ಉಮ್ಮರ್​ ಫಾರೂಕ್​ ಎಂ.ಆರ್​. ಅಲಿಯಾಸ್​ ಉಮ್ಮರ್​, ಬೆಳ್ಳಾರೆ ನಿವಾಸಿ ಅಬೂಬಕ್ಕರ್​ ಸಿದ್ದೀಕ್​ ಅಲಿಯಾಸ್​ ಪೈಂಟರ್​ ಸಿದ್ದೀಕ್​ ಅಲಿಯಾಸ್​ ಗುಜರಿ ಸಿದ್ದೀಕ್​ನನ್ನು ಹುಡುಕಿಕೊಟ್ಟವರಿಗೆ ತಲಾ 2 ಲಕ್ಷ ರೂ. ಬಹುಮಾನ ಘೋಷಿಸಲಾಗಿದೆ.

ಇವರ ಮಾಹಿತಿ ತಿಳಿದವರು ದೂ: 080-29510900, 8904241100, ಇಮೇಲ್​ info.blr.nia@gov.in, ಅಂಚೆ ವಿಳಾಸ: ಪೊಲೀಸ್​ ಅಧೀಕ್ಷಕರು, ರಾಷ್ಟ್ರೀಯ ತನಿಖಾ ದಳ (ಎನ್​ಐಎ), 8ನೇ ಮಹಡಿ ಸರ್​ ಎಂ.ವಿಶ್ವೇಶ್ವರಯ್ಯ ಕೇಂದ್ರೀಯ ಸದನ, ದೊಮ್ಲೂರು, ಬೆಂಗಳೂರು-560071ಗೆ ಮಾಹಿತಿ ನೀಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net