ರಾಜಕುಮಾರ ಟಾಕಳೆ ವಿರುದ್ಧ ಎಫ್​ಐಆರ್​; ಕಾಂಗ್ರೆಸ್​ ಯುವ ನಾಯಕಿ ನವ್ಯಶ್ರೀ ಪ್ರಕರಣ..

honeytrap navyasri
Published on

ಬೆಳಗಾವಿ: ಕಾಂಗ್ರೆಸ್ ಯುವ ನಾಯಕಿ ನವ್ಯಶ್ರೀ ರಾವ್​ ಮತ್ತು ರಾಜಕುಮಾರ ಟಾಕಳೆ ಸಂಬಂಧಿತ ಸಂಘರ್ಷದ ಪ್ರಕರಣದಲ್ಲಿ ಇದೀಗ ಟಾಕಳೆ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಟಾಕಳೆ ವಿರುದ್ಧ ನವ್ಯಶ್ರೀ ದಾಖಲಿಸಿರುವ ದೂರಿನ ಮೇರೆಗೆ ಬೆಳಗಾವಿ ಎಪಿಎಂಸಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಾಜಕುಮಾರ ಟಾಕಳೆ ವಿರುದ್ಧ ನವ್ಯಶ್ರೀ ಹಲವಾರು ಆರೋಪಗಳನ್ನು ಮಾಡಿದ್ದು, ಅತ್ಯಾಚಾರ, ಕಿಡ್ನ್ಯಾಪ್​, ಗರ್ಭಪಾತ ಮಾಡಿಸಿದ್ದು, ‌ಮೋಸ, ಮಹಿಳೆ ಮೇಲೆ ಹಲ್ಲೆ, ಅವಾಚ್ಯ ನಿಂದನೆ, ಜೀವ ಬೆದರಿಕೆ, ಗೌರವಕ್ಕೆ ಧಕೆ ತರುವುದು ಮಾತ್ರವಲ್ಲದೆ ಲೈಂಗಿಕ ಪ್ರಚೋದನಕಾರಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಕ್ಕೆ ಅಪ್​ಲೋಡ್ ಮಾಡಿ, ಖಾಸಗಿತನಕ್ಕೆ ಧಕ್ಕೆ ವಿಚಾರವಾಗಿಯೂ ದೂರು ನೀಡಲಾಗಿದೆ. ಈ ಮೇರೆಗೆ ಸಂಬಂಧಿತ ಸೆಕ್ಷನ್​ಗಳನ್ವಯ ಎಫ್​ಐಆರ್ ದಾಖಲು ಮಾಡಲಾಗಿದೆ.

ಇಂದು ಈ ಕುರಿತು ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ನವ್ಯಶ್ರೀ, ದೂರು ನೀಡಿ ಖಾಸಗಿ ಹೋಟೆಲ್​ಗೆ ತೆರಳಿದ್ದು, ನಾಳೆ ಬೆಳಗ್ಗೆ ಬೆಂಗಳೂರಿಗೆ ತೆರಳಿ ಮತ್ತೆ ಸೋಮವಾರ ಬೆಳಗಾವಿಗೆ ವಾಪಸ್ ಆಗಲಿದ್ದಾರೆ ಎನ್ನಲಾಗಿದೆ. ಈ ಹಿಂದೆ ನವ್ಯಶ್ರೀ ವಿರುದ್ಧ ರಾಜಕುಮಾರ ಟಾಕಳೆ ಕೇಸ್ ದಾಖಲಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net