ಮುಸ್ಲಿಂ ಮಹಿಳೆಗೆ ದೈವದ ಆವೇಶ

muslim
Published on

ಮೂಡುಬಿದಿರೆ: ಪುರಸಭೆ ವ್ಯಾಪ್ತಿಯ ಗಂಟಾಲ್ಕಟ್ಟೆಯ ಮನೆಯೊಂದರಲ್ಲಿ ನಡೆದ ಕೊರಗಜ್ಜ ದೈವಾರಾಧನೆ ಸಂದರ್ಭ ಮುಸ್ಲಿಂ ಮಹಿಳೆಯೊಬ್ಬರಿಗೆ ಆವೇಶ ಬಂದಿದೆ.

ಕೊರಗಜ್ಜನ ಗುಡಿಯಲ್ಲಿ ಭಾನುವಾರ ನೇಮ ನಡೆದಿದ್ದು, ಈ ಸಂದರ್ಭ ಅಲ್ಲಿಗೆ ಮುಸ್ಲಿಂ ಸಮುದಾಯದ ಇಬ್ಬರು ಮಹಿಳೆಯರೂ ಬಂದಿದ್ದರು. ಆಗ ಓರ್ವ ಮಧ್ಯ ವಯಸ್ಕ ಮಹಿಳೆಗೆ ಆವೇಶ ಬಂದಿದೆ. ಆವೇಶ ಸಂದರ್ಭ ಮಹಿಳೆ ತುಳುವಿನಲ್ಲಿ ಮಾತನಾಡಿದ್ದು, ಅಸ್ಪಷ್ಟವಾಗಿ ಕೇಳುತ್ತಿತ್ತು. ಮಹಿಳೆ ಕಷ್ಟ ಹೇಳಿಕೊಂಡು ದೈವದ ಸಾನ್ನಿಧ್ಯಕ್ಕೆ ಬಂದಿದ್ದರು ಎನ್ನಲಾಗಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net