ಮುಸ್ಲಿಂ ಕುಟುಂಬದಿಂದ ಮಹಾಂತಲಿಂಗ ಶ್ರೀಗಳ ತುಲಾಭಾರ

26SND-01
Published on

ಸಿಂಧನೂರು: ಗೋನವಾರ ಗ್ರಾಮದಲ್ಲಿ ಮುಸ್ಲಿಂ ಸಮುದಾಯದ ಹಸನ್ ಸಾಬ್ ಕುಟುಂಬದ ವಲೀಮಾ ಕಾರ್ಯಕ್ರಮದಲ್ಲಿ ಮಾನ್ವಿ ತಾಲೂಕಿನ ಕರೇಗುಡ್ಡ ಶ್ರೀ ಮಹಾಂತೇಶ್ವರ ಮಠದ ಮಹಾಂತಲಿಂಗ ಸ್ವಾಮೀಜಿ ಅವರ 33ನೇ ತುಲಾಭಾರ ಸೇವೆಯನ್ನು ಸೋಮವಾರ ನಡೆಸಲಾಯಿತು.

ಚಾಂದಬೀ ಹಾಗೂ ಹಸನ್ ಸಾಬ್ ಮುಲ್ಲಾರ್ ಕುಟುಂಬದ ಸದಸ್ಯರು, ವರ ಅಬ್ಬಾಸ್ ಅಲಿ, ವಧು ಶಬೀನಾ ಬೇಗಂ ತುಲಾಭಾರ ಸೇವೆ ಮೂಲಕ ಭಾವೈಕ್ತ ಮೆರೆದರು. ನಂತರ ಗೋನವಾರ ಗುರು ಗಫೂರ್ ತಾತ ಅವರ ತುಲಾಭಾರ ಸೇವೆಯೂ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net