ಯುವಕನ ಕೊಲೆ ಪ್ರಕರಣ ಐವರ ಬಂಧನ

CRIME
Published on

ಮಂಗಳೂರು: ಪಂಪ್‌ವೆಲ್ ಕಪಿತಾನಿಯೋ ಬಳಿಯ ಲಾಡ್ಜ್‌ನಲ್ಲಿ ಶನಿವಾರ ನಡೆದ ಧನುಷ್ ಪಚ್ಚನಾಡಿ(20) ಕೊಲೆ ಪ್ರಕರಣದ ಐವರು ಆರೋಪಿಗಳನ್ನು ಬಂಧಿಸಲಾಗಿದೆ.

ಸುರತ್ಕಲ್‌ನ ಜೋಯ್ಸನ್ ಯಾನೆ ಜೇಸನ್ ಯಾನೆ ಜೋಯ್(21), ನಂದಿಗುಡ್ಡ ಸರ್ಕಲ್ ಬಳಿಯ ಜಪ್ಪು ಬಪ್ಪಾಲ್ ನಿವಾಸಿ ಪ್ರಮೀತ್ ಡಿ.(24), ವಾಮಂಜೂರು ಅಮೃತನಗರ ಕಾರ್ತಿಕ್ ಯಾನೆ ಕಾರ್ತಿ(21), ಪಚ್ಚನಾಡಿ ಶಿವಾಜಿನಗರ ನಿವಾಸಿ ಪ್ರಜ್ವಲ್ ಯಾನೆ ಪಜ್ಜು(22), ಪಚ್ಚನಾಡಿ ಆಶ್ರಯ ಕಾಲನಿ ನಿವಾಸಿ ದುರ್ಗೇಶ್ ಯಾನೆ ಮುನ್ನ(22) ಬಂಧಿತರು. ಇವರಿಂದ ಮಾರಕಾಸ್ತ್ರ ಮತ್ತು ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ. ಇನ್ನೋರ್ವ ಆರೋಪಿಗಾಗಿ ಶೋಧ ಮುಂದುವರಿದಿದೆ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.

ಬಂಧಿತರೆಲ್ಲ ಸ್ನೇಹಿತರಾಗಿದ್ದು, ಧನುಷ್ ಮತ್ತು ಇತರರಿಗೆ ಬೈದಾಡಿಕೊಂಡಿರುವ ಹಳೇ ದ್ವೇಷವೊಂದಿತ್ತು. ಅದರ ಕುರಿತಾಗಿ ರಾಜಿ ಪಂಚಾಯಿತಿ ಮಾಡಲು ದುರ್ಗೇಶ್ ಮೂಲಕ ಲಾಡ್ಜ್ ಕರೆಸಿಕೊಂಡಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದು, ಬೈದಾಡಿ ಹಲ್ಲೆ ನಡೆಸಿದ್ದಾರೆ. ಈ ಪೈಕಿ ಜೋಯ್ಸನ್ ಚೂರಿಯಿಂದ ಧನುಷ್‌ನ ಎದೆಗೆ ಚುಚ್ಚಿ ಕೊಲೆ ಮಾಡಿದ್ದು, ನಂತರ ಎಲ್ಲರೂ ಪರಾರಿಯಾಗಿದ್ದಾರೆ.

ಬಂಧಿತರ ಪೈಕಿ ಮೂವರು ಗಾಂಜಾ ವ್ಯಸನಿಗಳಾಗಿದ್ದು, ಮಾರಾಟ, ಸೇವನೆ ಕುರಿತಾಗಿ ನಗರದ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net