ಕೊಲೆಯ ಇತರ ಆರೋಪಿಗಳ ಬಂಧನ ಶೀಘ್ರ

7mnv03
Published on

ಮಾನ್ವಿ: ಮದ್ಲಾಪುರ ಗ್ರಾಮದಲ್ಲಿ ಇತ್ತೀಚೆಗೆ ಹತ್ಯೆಗೀಡಾದ ಕಾಂಗ್ರೆಸ್ ಮುಖಂಡ ಪ್ರಸಾದ್ ಅವರ ನಿವಾಸಕ್ಕೆ ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಹಾಗೂ ಶಾಸಕ ಜಿ.ಹಂಪಯ್ಯ ನಾಯಕ ಸೋಮವಾರ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.

ಪ್ರಸಾದ್ ಮದ್ಲಾಪುರ ಹತ್ಯೆ ಖಂಡನೀಯವಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಇತರ ಆರೋಪಿಗಳನ್ನು ಬೇಗ ಬಂಧಿಸಲಾಗುವುದು ಎಂದು ಎಸ್ಪಿ ತಿಳಿಸಿದ್ದಾರೆ. ಕುಟುಂಬದವರು ಧೈರ್ಯ ತಂದುಕೊಳ್ಳಬೇಕು ಎಂದು ಹೇಳಿದರು.

ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಸಲೀಂಪಾಷಾ, ಪ್ರಮುಖರಾದ ಜಯಣ್ಣ, ಕೆ.ಶಾಂತಪ್ಪ, ಹನುಮೇಶ ಮದ್ಲಾಪುರ, ವಸಂತ ಕೊಡ್ಲಿ, ಪ್ರವೀಣಕುಮಾರ, ಜಿ.ನಾಗರಾಜ, ರೌಡೂರು ಮಹಾಂತೇಶಸ್ವಾಮಿ, ಶೇಖ್ ಸತ್ತರ್ ಬಂಗ್ಲೆವಾಲೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net