ವಿಷಕಾರಿಯಾಗುತ್ತಿದೆ ತಾಯಿ ಹಾಲು

29 RON 1
Published on

ರೋಣ: ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕ ಬಳಸಿದ ಆಹಾರಧಾನ್ಯ ಸೇವಿಸುತ್ತಿರುವುದರಿಂದ ಅಮೃತಕ್ಕೆ ಸಮಾನವಾದ ತಾಯಿ ಹಾಲು ಕೂಡ ಮಲಿನವಾಗುತ್ತಿದೆ. ಸಾವಯವ ಕೃಷಿ ಹಾಗೂ ಪರಿಸರ ಸಂರಕ್ಷಣೆ ಮಾಡುವಲ್ಲಿ ಸಮಾಜದ ಪಾತ್ರ ದೊಡ್ಡದಿದೆ ಎಂದು ಶಿಕ್ಷಕ ಸಂಗಮೇಶ ದಿಂಡೂರ ತಿಳಿಸಿದರು.

ಪಟ್ಟಣದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಕರ್ನಾಟಕ 50ನೇ ವರ್ಷದ ಸಂಭ್ರಮದ ಉಪನ್ಯಾಸ, ಕವನವಾಚನ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ‘ಪರಿಸರದ ಸಮಸ್ಯೆಗಳು ಹಾಗೂ ಪರಿಹಾರ’ ಕುರಿತು ಅವರು ಉಪನ್ಯಾಸ ನೀಡಿದರು. ದೇಶಾದ್ಯಂತ ಕೃಷಿ ಪದ್ಧತಿಯು ಸಂಪೂರ್ಣವಾಗಿ ರಾಸಾಯನಿಕಗಳ ಮೇಲೆ ಅವಲಂಬಿತವಾಗಿದೆ. ಭೂಮಿಗೆ ಹಾಕಿದ ಬೆಳೆ ಚೆನ್ನಾಗಿ ಬರಬೇಕೆಂದರೆ ರಾಸಾಯನಿಕ ಗೊಬ್ಬರ ಬಳಕೆ ಮಾಡಿ ಬಿತ್ತನೆ ಕೈಗೊಳ್ಳಬೇಕು. ಬೆಳೆಗೆ ಕೀಟ ಬಾಧೆ ತಗುಲಿದರೆ ಕೀಟನಾಶಕ ಸಿಂಪರಣೆ ಮಾಡಲೇಬೇಕು. ಅದನ್ನು ಬಳಕೆ ಮಾಡಿ ಬೆಳೆದಿರುವ ಬೆಳೆಯನ್ನು ಸೇವಿಸಿದಾಗ ತಾಯಿಯ ಎದೆ ಹಾಲು ಕೂಡ ಮಲಿನವಾಗಿ ಪರಿವರ್ತನೆ ಆಗುವಂತ ಸ್ಥಿತಿ ಬಂದೊದಗಿದೆ ಎಂದರು. ಅಶೋಕ ನವಲಗುಂದ ಪ್ರಾಸ್ತಾವಿಕವಾಗಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ ಪ್ರತಿ ಶನಿವಾರಕ್ಕೊಮ್ಮೆ ನಡೆಸುವ ಕಾರ್ಯಕ್ರಮ ಇದಾಗಿದ್ದು, ಶಾಲೆ-ಕಾಲೇಜುಗಳಿಗೂ ತಲುಪುವಂತೆ ಮಾಡಬೇಕು ಎಂದರು. ಉಪತಹಸೀಲ್ದಾರ್ ಜಿ.ಟಿ. ಕೊಪ್ಪದ, ಶೈಲಾಶ್ರೀ ಕುರಟ್ಟಿ, ಸಿದ್ದರಾಮಪ್ಪ ಲಕ್ಷೆ್ಮೕಶ್ವರ, ಶಿವಾನಂದ ಹುನಗುಂಡಿ, ರಮಾಕಾಂತ ಕಮತಗಿ, ವಿ.ಕೆ. ಪಾಟೀಲ, ಪಾಂಡುರಂಗ ಮಾನ್ಪಡೆ, ಶಿವಪ್ರಕಾಶ ಹಿರೇಮಠ, ಎಸ್.ಎನ್. ಪಾಟೀಲ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net