ಸಂವಿಧಾನ ಬದಲಾಗಬೇಕು
ಶಾಸಕ ಅಮರೇಗೌಡ ಬಯ್ಯಾಪುರ ಹೇಳಿಕೆ

IMG-20221203-WA0018.jpg
Published on

ಕೊಪ್ಪಳ: ಎಂಎಲ್ಎ ಮತ್ತು ಎಂಪಿಗಳಿಗೆ ಕಾನೂನು ಪದವಿ ಕಡ್ಡಾಯ ಮಾಡಬೇಕು. ಈ ನಿಟ್ಟಿನಲ್ಲಿ ಸಂವಿಧಾನ ಬದಲಾವಣೆ ಮಾಡಬೇಕೆಂದು ಶಾಸಕ ಅಮರೇಗೌಡ ಬಯ್ಯಾಪುರ ಹೇಳಿದರು.

ನಗರದ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಕೀಲರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸದ್ಯ ಸಂವಿಧಾನ ಪ್ರಕಾರ ಹೆಬ್ಬೆಟ್ಟು ಇದ್ದವರೂ ಸಿಎಂ, ಪಿಎಂ ಆಗಲು ಅವಕಾಶವಿದೆ. ಕಾನೂನು ಜ್ಞಾನ ಇಲ್ಲದವರು ಕಾನೂನು ರಚಿಸುವಂತಾಗಿದೆ. ಅದು ಬದಲಾಗಬೇಕು. ಸದ್ಯ ಆಗದಿರಬಹುದು. ಮುಂದೆ ಆಗಬಹುದು.
ಕಾನೂನು ಸಚಿವ ಮಾಧುಸ್ವಾಮಿ ಹಲವು ಕಾನೂನು ವಾಪಸ್ ಪಡೆದಿದ್ದಾರೆ. ಸದನದಲ್ಲಿ ಮಸೂದೆ ಮಂಡಿಸಿದಾಗ ಅಧ್ಯಕ್ಷರು ಯಾರು ಕಾನೂನು ಪರವಾಗಿ ಇದಿರಿ ಎಂದಾಗ ನಾವು ಸುಮ್ಮನೆ ಕೈ ಎತ್ತುತ್ತೇವೆ. ಆದರೆ, ಕಾನೂನು ಏನೆಂಬುದು ಗೊತ್ತಿಲ್ಲ. ಆದರೂ ಬಹುಮತ ಇದ್ದವರು ಹೇಳಿದ್ದು ಒಪ್ಪಿತವಾಗುತ್ತದೆ ಎಂದರು. ಇದು ಬದಲಾವಣೆಯಾಗಬೇಕು. ಸದ್ಯ ಇದು ಆಗದಿರಬಹುದು. ಮುಂದೆ ಆಗಬಹುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net