ಮೊಬೈಲ್ ಅಂಗಡಿಗಳಲ್ಲಿ ಸಿಮ್‌ಗಳ ದುರ್ಬಳಕೆ: ರಾಘವೇಂದ್ರ

B.Y. Raghavendra (1)
Published on

ಶಿವಮೊಗ್ಗ: ಮೊಬೈಲ್ ಅಂಡಿಗಳಲ್ಲಿ ಸಿಮ್‌ಗಳು ದುರ್ಬಳಕೆಯಾಗುತ್ತಿರುವುದು ತೀರ್ಥಹಳ್ಳಿ ಬಿಜೆಪಿ ಕಾರ್ಯಕರ್ತನ ವಿಚಾರಣೆ ಬಳಿಕ ಬೆಳಕಿಗೆ ಬಂದಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಆತಂಕ ವ್ಯಕ್ತಪಡಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೀರ್ಥಹಳ್ಳಿಯ ಸಾಯಿ ಪ್ರಸಾದ್ ಅವರ ಮೊಬೈಲ್ ಸಿಮ್ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಏಳೆಂಟು ಹಿಂದುಗಳ ಆಧಾರ್ ಸೇರಿ ದಾಖಲೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ದೂರಿದರು. ಮೊಬೈಲ್ ಅಂಗಡಿಯಲ್ಲಿ ಹೊಸ ಸಿಮ್ ಖರೀದಿ ಮಾಡಿದ ಬಳಿಕ ಹಿಂದು ಯುವಕರು ಕೊಡುವ ದಾಖಲಾತಿ ಫೋರ್ಜರಿ ಮಾಡಿ ಅವರ ಹೆಸರಿನಲ್ಲಿ ಇನ್ನೊಂದು ಸಿಮ್ ಖರೀದಿ ಮಾಡಿದ್ದಾರೆ. ಇಂತಹ ದುಷ್ಕೃತ್ಯ ಮಾಡುವ ಮನಸ್ಥಿತಿ ಇರುವ ವ್ಯಕ್ತಿಗಳಿಗೆ ಸಿಮ್ ಕೊಡುತ್ತಿದ್ದಾರೆ ಎಂದು ದೂರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net