ಮಿನಿ ಒಲಿಂಪಿಕ್‌ನಲ್ಲಿ ಹರಿಹರಕ್ಕೆ 10 ಪದಕ

HARIHARA SPORTS
Published on

ಹರಿಹರ: ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಈತ್ತೀಚೆಗೆ ಆಯೋಜಿಸಿದ್ದ ಮಿನಿ ಒಲಿಂಪಿಕ್ ಕ್ರೀಡಾಕೂಟದಲ್ಲಿ ಹರಿಹರದ ಜಿಲ್ಲಾ ಟೆಕ್ವಾಂಡೋ ಸಂಸ್ಥೆ ಕ್ರೀಡಾಪಟುಗಳು 2 ಚಿನ್ನ, 2 ಬೆಳ್ಳಿ ಮತ್ತು 6 ಕಂಚಿನ ಪದಕಗಳನ್ನು ಗೆದ್ದಿದ್ದಾರೆ.

ಕ್ರೀಡಾಪಟುಗಳಾದ ಪಿ.ಎಸ್. ಶಷಾಂಕ್, ವಿ.ಎಸ್. ಕಲ್ಪನಾಗೆ ಚಿನ್ನ, ಬಿ.ಸಿ. ರಾಘವೇಂದ್ರ, ಪಿ.ಎಸ್.ಪೃಥ್ವಿರಾಜ್‌ಗೆ ಬೆಳ್ಳಿ, ಶಶ್ರಿತಾ, ಸಿ. ಪ್ರಿಯಾಂಕ, ಎನ್. ಮಾನಸಾ, ಎಂ. ಪಲ್ಲವಿ, ಎಚ್.ಎಂ. ಸೌಂದರ್ಯ, ಸಿ. ಶಬಾನಾ ಬಾನು ಕಂಚಿನ ಪದಕ ಪಡೆದಿದ್ದಾರೆ.

ಸಂಸ್ಥೆಯ ಅಧ್ಯಕ್ಷ ಜಿ.ವಿ. ಪ್ರವೀಣ್‌ಕುಮಾರ್, ಉಪಾಧ್ಯಕ್ಷ ಮಂಜುನಾಥ, ಕ್ಷೇತ್ರ ಶಿಕ್ಷಣಾಧಿಕಾರಿ ಯು. ಬಸವರಾಜಪ್ಪ, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಸದಸ್ಯ ರಾಜು ರೋಖಡೆ, ತಪೋವನದ ಶಶಿಕುಮಾರ್ ಮೆಹರ‌್ವಾಡೆ ವಿಜೇತರನ್ನು ಸನ್ಮಾನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net