ಎಂ.ವೆಂಕಟೇಶ ಕುಮಾರಗೆ ಸುವರ್ಣಗಿರಿ ಪ್ರಶಸ್ತಿ

M Venkatesh Kumar
ಎಂ.ವೆಂಕಟೇಶ ಕುಮಾರ, ಖ್ಯಾತ ಹಿಂದುಸ್ಥಾನಿ ಸಂಗೀತಗಾರ.
Published on

ಮಸ್ಕಿ: ಖ್ಯಾತ ಹಿಂದುಸ್ಥಾನಿ ಸಂಗೀತಗಾರ ಎಂ.ವೆಂಕಟೇಶ ಕುಮಾರ, ಕನಕಗಿರಿಯ ಚನ್ನಮಲ್ಲ ಶಿವಯೋಗಿಗಳ ಮಠದಿಂದ ನೀಡಲಾಗುವ ಸುವರ್ಣಗಿರಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಮಠದ ಪೀಠಾಧಿಪತಿ ಡಾ.ಚನ್ನಮಲ್ಲ ಮಹಾಸ್ವಾಮೀಜಿ ತಿಳಿಸಿದ್ದಾರೆ.

ಪ್ರಶಸ್ತಿಯು 25 ಸಾವಿರ ರೂ. ತಾಮ್ರಪತ್ರ, ಪ್ರಶಸ್ತಿ ಪತ್ರ ಒಳಗೊಂಡಿದೆ. ಡಿ.14 ರಂದು ಮೆದಕಿನಾಳ ಗ್ರಾಮದಲ್ಲಿ ಚನ್ನಮಲ್ಲ ಶಿವಯೋಗಿಗಳ 67 ನೇ ಜಾತ್ರಮಹೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net