ಟ್ರಾಕ್ಟರ್‌ನಲ್ಲಿ ಸಾಗಿದ ಮದುವೆ ದಿಬ್ಬಣ!

marriage-tractor
Published on

ಬ್ರಹ್ಮಾವರ: ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಬಾರಕೂರಿನ ಶಿವಗಿರಿಯಲ್ಲಿ ಶುಕ್ರವಾರ ಟ್ರಾಕ್ಟರ್‌ನಲ್ಲಿ ಸಾಗಿದ ಮದುವೆ ದಿಬ್ಬಣ ಸಾರ್ವಜನಿಕರ ಗಮನ ಸೆಳೆಯಿತು.

ಕಾಳಿಕಾಂಬ ದೇವಳ ಸಮೀಪದ ನಿವಾಸಿ ಕೃಷಿಕ ಮಂಜಪ್ಪ ಅವರ ಅವಿಭಕ್ತ ಕುಟುಂಬದ ಇಬ್ಬರು ಯುವಕರ ವಿವಾಹ ಬಾರಕೂರು ಶಿವಗಿರಿ ಕ್ಷೇತ್ರದ ಗುರುದೇವ ಭವನದಲ್ಲಿ ಆಯೋಜಿಸಲಾಗಿತ್ತು. ಮಂಜಪ್ಪ ಪೂಜಾರಿ ಅವರ ಬಾವ ಭೋಜ ಪೂಜಾರಿ - ಶಾರದಾ ದಂಪತಿ ಪುತ್ರ ಪ್ರಮೋದ್‌ಗೆ ಮರವಂತೆ ಆನಂದ ಪೂಜಾರಿಯವರ ಮಗಳು ಜ್ಯೋತಿ ಜತೆ ಹಾಗೂ ನರಸಿಂಹ ಪೂಜಾರಿ - ವಿಮಲಾ ದಂಪತಿ ಪುತ್ರ ಗಣೇಶ್‌ಗೆ ನಿಟ್ಟೂರು ಸುರೇಂದ್ರ ಪೂಜಾರಿಯವರ ಮಗಳು ಸುಷ್ಮಾ ಅವರೊಂದಿಗೆ ವಿವಾಹ ನೆರವೇರಿತು.

ಹೊಸದಾಗಿ ಖರೀದಿಸಿದ ಟ್ರಾೃಕ್ಟರ್‌ನಲ್ಲಿ ಮದುಮಕ್ಕಳನ್ನು ಕೂರಿಸಿ ಕಲ್ಯಾಣ ಮಂಟಪಕ್ಕೆ ಕರೆತರಲಾಯಿತು. ಕುಟುಂಬ ಟ್ರಾೃಕ್ಟರ್‌ನ ಹಿಂದೆ ಮೆರವಣಿಗೆಯಲ್ಲಿ ಸಾಗಿತು. ಮದುವೆ ಬಳಿಕ ಕಲ್ಯಾಣ ಮಂಟಪದಿಂದ ಎರಡು ಜೋಡಿಗಳನ್ನೂ ಟ್ರಾಕ್ಟರ್‌ನಲ್ಲಿಯೇ ಕರೆತಂದು ಮನೆ ತುಂಬಿಸಿಕೊಳ್ಳಲಾಯಿತು.

ಮಂಜಪ್ಪ ಭತ್ತದ ಬೆಳೆಯಲ್ಲಿ ವಿಶೇಷ ಸಾಧಕರಾಗಿದ್ದು, 500 ಮುಡಿ ಭತ್ತದ ತಿರಿ ಮಾಡುವ ಹಳೇ ಪದ್ಧತಿ ಮುಂದುವರಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net