ಪುರ್ಲೆ ಪರ ಶಾಸಕ ಮತಯಾಚನೆ, ನಮ್ಮ ಮಾನವಿ ಪದವಿ ಪೂರ್ವ ಕಾಲೇಜ್ ಕಾರ್ಯಕ್ರಮ

26102020 Manvi election campain
Published on

ಮಾನ್ವಿ: ವಿಧಾನ ಪರಿಷತ್‌ನ ಈಶಾನ್ಯ ಶಿಕ್ಷಕರ ಕ್ಷೇತ್ರಕ್ಕೆ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ತಿಮ್ಮಯ್ಯ ಪುರ್ಲೆ ಪರ ಶಾಸಕ ರಾಜಾ ವೆಂಕಟಪ್ಪ ನಾಯಕ ಶಿಕ್ಷಕರಲ್ಲಿ ಮನವಿ ಮಾಡಿದರು.

ಪಟ್ಟಣದ ನಮ್ಮ ಮಾನವಿ ಪದವಿ ಪೂರ್ವ ಕಾಲೇಜ್‌ನಲ್ಲಿ ಹಮ್ಮಿಕೊಂಡಿದ್ದ ಮತಯಾಚನೆ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು. ಅಭ್ಯರ್ಥಿ ತಿಮ್ಮಯ್ಯ ಪುರ್ಲೆ ಅವರು ಕಳೆದ 10 ವರ್ಷಗಳಿಂದ ಉಪನ್ಯಾಸಕರ ಸಂಘದ ಅಧ್ಯಕ್ಷರಾಗಿ ಮತ್ತು 25 ವರ್ಷಗಳಿಂದ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ನಿರಂತರ ಹೋರಾಟ ಮಾಡುವ ಇವರಿಗೆ ಅ.28 ರಂದು ನಡೆಯುವ ಚುನಾವಣೆಯಲ್ಲಿ ಪುರ್ಲೆಯನ್ನು ಬೆಂಬಲಿಸಬೇಕು ಎಂದರು.

ಪ್ರಮುಖರಾದ ಈರಣ್ಣ ಮರ್ಲಟ್ಟಿ, ರೇವಣಸಿದ್ದಯ್ಯ ಹಿರೇಮಠ, ರಜಾಕ್‌ಪಾಷಾ, ಎಸ್.ಎಸ್.ಪಾಟೀಲ್, ಬಸವರಾಜ ಕರಡಿಗುಡ್ಡ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net